– ವಿಶ್ಲೇಷಣಾ ಮೌಲ್ಯಾಂಕನದ ಮೂಲಕ ತೇರ್ಗಡೆ
– ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬದಲಾವಣೆ ಇಲ್ಲ
ಬೆಂಗಳೂರು: ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ 9ನೇ ತರಗತಿಯವರೆಗೆ ಪರೀಕ್ಷೆ ಇಲ್ಲದೇ ವಿಶ್ಲೇಷಣಾ ಮೌಲ್ಯಾಂಕನದ ಮೂಲಕ ತೇರ್ಗಡೆ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಕ್ರಿಯಾ ಶೀಲತೆ ಪರಿಗಣಿಸಿ ವಿಶ್ಲೇಷಣಾ ಮೌಲ್ಯಾಂಕ ನೀಡಲಾಗುತ್ತದೆ. ಆಯಾ ಶಾಲೆಗಳ ಶಿಕ್ಷಕರೇ ಈ ವಿಶ್ಲೇಷಣಾ ಮೌಲ್ಯಾಂಕನ ಅಂಕ ನೀಡಿ ಮುಂದಿನ ತರಗತಿಗಳಿಗೆ ಪಾಸ್ ಮಾಡಬೇಕಾಗುತ್ತದೆ.
Advertisement
Advertisement
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊರೊನಾ ಹಿನ್ನೆಲೆಯಲ್ಲಿ 10-12 ನೇ ತರಗತಿಗಳಿಗೆ ಆನ್ ಲೈನ್ ಪಠ್ಯ ಬೋಧನೆಗೆ ಆದ್ಯತೆ ಕೊಡಲು ಸೂಚನೆ ನೀಡಲಾಗಿದ್ದು, ಪರೀಕ್ಷೆ ನಡೆಯುವವರೆಗೂ ಆನ್ ಲೈನ್ ಪಠ್ಯ ಬೋಧನೆಗೆ ಅವಕಾಶ ನೀಡಿದೆ.
Advertisement
ಇಂದಿಗೆ ಶಾಲಾ-ಕಾಲೇಜು ರಜೆ ಅವಧಿ ಮುಕ್ತಾಯವಾಗಿದ್ದು, ಮತ್ತೆ ರಜೆ ವಿಸ್ತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುವವರೆಗೂ ಶಾಲಾ-ಕಾಲೇಜು ಪ್ರಾರಂಭ ಮಾಡದೇ ನಿರ್ಧಾರ ಕೈಗೊಳ್ಳಲಾಗಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳಿಗೆ ರಜೆ ವಿಸ್ತರಣೆ ಮಾಡಿದೆ.