– ಸೈಬರ್ ಕ್ರೈಮ್ ವಿಭಾಗದೊಂದಿಗೆ ತನಿಖೆ
ಚೆನ್ನೈ: ಕಳೆದುಹೋಗಿದ್ದ ಮತ್ತು ಕಳವು ಮಾಡಲಾಗಿದ್ದ ಒಂದು ಕೋಟಿ ರೂಪಾಯಿ ಮೌಲ್ಯದ 863 ಮೊಬೈಲ್ಗಳನ್ನು ಚೆನ್ನೈ ಪೊಲೀಸರು ಪತ್ತೆ ಹಚ್ಚಿ ಫೋನ್ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ನಗರದಾದ್ಯಂತ ಕಾಣೆಯಾದ ಫೋನ್ಗಳನ್ನು ಪತ್ತೆಹಚ್ಚಲು ಚೆನ್ನೈ ಪೊಲೀಸರು ಅಕ್ಟೋಬರ್ ತಿಂಗಳಿನಲ್ಲಿ ಸೈಬರ್ ಕ್ರೈಮ್ ವಿಭಾಗದೊಂದಿಗೆ ಸೇರಿ ತನಿಖೆಯನ್ನು ಮಾಡುತ್ತಿದ್ದರು.ಫೋನ್ಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಐಎಂಇಐ (ಇಂಟನ್ರ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ) ಯನ್ನು ಬಳಕೆ ಮಾಡಿ ಫೋನ್ಗಳನ್ನು ಪತ್ತೆ ಮಾಡಿದ್ದಾರೆ.
Advertisement
Advertisement
ರಾಜರಥಿನಂ ಕ್ರೀಡಾಂಗಣದಲ್ಲಿ ಪೊಲೀಸರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ವೇಳೆ ಆಯುಕ್ತ ಮಹೇಶ್ ಕುಮಾರ್ ಅಗರ್ವಾಲ್ ಐಪಿಎಸ್, ಹೆಚ್ಚುವರಿ ಆಯುಕ್ತರು ಆರ್ ದಿನಕರನ್ ಮತ್ತು ಎ ಅರುಣ್ ಅವರು ಫೋನ್ಗಳನ್ನು ಕಳೆದುಕೊಂಡಿರುವವರಿಗೆ ಹಸ್ತಾಂತರಿಸಿದ್ದಾರೆ.
Advertisement
Advertisement
ಕಳೆದು ಹೋಗಿದ್ದ ಫೋನ್ಗಳನ್ನು ಮರಳಿ ಪಡೆದಿರುವವರು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮೂರು ಫೋನ್ಗಳನ್ನು ಕಳೆದುಕೊಂಡಿದ್ದೆನು. ಈಗ ಅವೆರಡೂ ಮೊಬೈಲ್ ಮರಳಿ ಸಿಕ್ಕಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.