ಬೆಂಗಳೂರು: ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಪೇಟೆಯ ಟೆಕ್ಸ್‌ಟೈಲ್ಸ್‌ನಲ್ಲಿ 2021 ಆಗಸ್ಟ್ 22 ರಂದು ಕಳ್ಳತನ ನಡೆದಿತ್ತು. ಕಳ್ಳತನ ಮಾಡಿದ ಗ್ಯಾಂಗ್, ಟೆಕ್ಸ್ ಟೈಲ್ ನಲ್ಲಿದ್ದ ಬರೊಬ್ಬರಿ 25 ಲಕ್ಷ ಹಣ ಕಳವು ಮಾಡಿ ಅದೇ ಅಂಗಡಿ ಮೇಲೆ “007 ಫಿರ್ ಆಯೇಂಗೆ ” ಎಂದು ಗೋಡೆ ಬರಹ ಬರೆದು ಸಾಧ್ಯವಾದ್ರೆ ನಮ್ಮನ್ನು ಹಿಡಿಯಿರಿ ನೋಡೋಣ ಎಂದು ಪೊಲೀಸರಿಗೆ ಚಾಲೆಂಜ್ ಮಾಡಿ ಹೋಗಿದ್ದ ಗ್ಯಾಂಗ್ ಅಂದರ್ ಆಗಿದೆ.
Advertisement
ಅಂಗಡಿಯನ್ನು ಕಳವು ಮಾಡಿದ ಗ್ಯಾಂಗ್, ಹೊರಗಡೆ ಬಂದು ಅದೇ ಅಂಗಡಿ ಮೇಲೆ 007 ಫಿರ್ ಆಯೇಂಗೆ ಎಂದು ಗೋಡೆ ಬರಹ ಬರೆದು ಸಾಧ್ಯವಾದ್ರೆ ನಮ್ಮನ್ನು ಹಿಡಿಯಿರಿ ನೋಡೋಣ ಎಂದು ಪೊಲೀಸರಿಗೆ ಚಾಲೆಂಜ್ ಮಾಡಿ ಸಿಸಿಟಿವಿ ಮುಂದೆನೇ ರಾಜಾರೋಷವಾಗಿ ನಡೆದುಕೊಂಡು ಹೋಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿಟಿ ಮಾರ್ಕೆಟ್ ಪೊಲೀಸರು, ಈ ರೀತಿ ಕಳ್ಳತನ ಮಾಡಿ 007 ಫಿರ್ ಆಯೇಂಗೆ ಎಂದು ಬರೆಯೋ ಧೈರ್ಯ ಮಾಡಿರುವ ಆ ಖದೀಮರ ಪತ್ತೆಗೆ ಬೆನ್ನುಬಿದ್ದಿದ್ದರು. ಇದನ್ನೂ ಓದಿ: ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ
Advertisement
Advertisement
ಕಳ್ಳರ ಬೆನ್ನತ್ತಿ ರಾಜಸ್ತಾನಕ್ಕೆ ಹೋದ ಪೊಲೀಸರಿಗೆ ಇದು ಬಿಚ್ಚು ಗ್ಯಾಂಗ್ ಅನ್ನೋ ನಟೋರಿಯಸ್ ಕಳ್ಳರ ಕೈವಾಡ ಅನ್ನೊದು ಗೊತ್ತಾಗಿತ್ತು. ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದ್ರೆ, ಯಡವಟ್ಟಾಗುತ್ತೆ ಎಂದು ತಾವೇ ಬರೋಬ್ಬರಿ ಹದಿನೈದು ದಿನಗಳ ಕಾಲ ಕ್ಯಾಂಪ್ ಹಾಕಿ ಪ್ರಮುಖ ಆರೋಪಿ ಸುನೀಲ್, ಭವಾನಿ ಸಿಂಗ್, ಆಶುರಾಮ್ ಗುಜಾರ್ ಮತ್ತು ಕಿಶೋರ್ ಸಿಂಗ್ ಎಂಬುವರನ್ನು ಬಂಧಿಸಿ, ಕಳ್ಳತನವಾಗಿದ್ದ 24 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಪೊಲೀಸರು ಬಿಚ್ಚು ಗ್ಯಾಂಗ್‍ನ ಈ ಖತಾರ್ನಾಕ್‍ಗಳನ್ನು ಬಂಧಿಸಿ, ಕರ್ನಾಟಕ ಪೊಲೀಸರ ಪವರ್ ತೋರಿಸಿದ್ದಾರೆ. ಇನ್ನೂ ಎಲ್ಲೆಲ್ಲಿ ಈ ಗ್ಯಾಂಗ್ ಕೈಚಳಕ ತೋರಿಸಿತ್ತು ಅನ್ನೋದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಇದನ್ನೂ ಓದಿ: ಬೈಕ್‍ಗಳ ನಡುವೆ ಡಿಕ್ಕಿ – ಲಾರಿಯಡಿ ಸಿಲುಕಿ ಸವಾರ ಸ್ಥಳದಲ್ಲೇ ಸಾವು
Advertisement