ಚಾಮರಾಜನಗರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸದಸ್ಯನಿಗೆ, ಬುಲೆಟ್ ಬೈಕ್‍ನ್ನು ಉಡುಗೊರೆಯಾಗಿ ನೀಡುವ ಮೂಲಕವಾಗಿ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಬೆಂಬಲಿಗರು ಸುದ್ದಿಯಾಗಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯನಾಗಿರುವ ತಾವರಕಟ್ಟೆಮೋಳೆ ಗ್ರಾಮದ ಮಹೇಶ್, ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ಈ ಬಾರಿ ಬೆಂಬಲಿಗರು ಹಾಗೂ ಅಭಿಮಾನಿಗಳು ಚಂದಾ ಹಣವನ್ನು ಸಂಗ್ರಹಿಸಿ ಬುಲೆಟ್ ಖರೀದಿಸಿ ಕೊಟ್ಟಿದ್ದಾರೆ. ಮಹೇಶ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಬುಲೆಟ್ ನೀಡಿದ್ದಾರೆ.
Advertisement
Advertisement
ಮಹೇಶ್ ಕಳೆದ ಎರಡು ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ಹಳ್ಳಿಗೆ ಅಗತ್ಯ ಇರುವ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಇವರು ಮಾಡಿರುವ ಕೆಲಸಗಳನ್ನು ಮೆಚ್ಚಿದ ಊರಿನ ಗ್ರಾಮಸ್ಥರು ಇವರನ್ನು ಮೂರನೇ ಬಾರಿ ಪಂಚಾಯತ್ ಚುನಾವಣೆಯಲ್ಲಿ ಮತಗಳನ್ನು ಹಾಕಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಮಹೇಶ್ ಅವರಿಗೆ ಬೆಂಲಿಗರು ಸಂತೋಷದಿಂದ ಬುಲೆಟ್ ಊಡುಗೊರೆಯಾಗಿ ನೀಡಿದ್ದಾರೆ.
Advertisement
Advertisement
ಬೆಂಬಲಿಗರೆ ಹಣ, ಮತ ಎರಡನ್ನೂ ಕೊಟ್ಟು ಆಯ್ಕೆ ಮಾಡಿದ್ದರು. ಬಹುತೇಕ ಕೂಲಿಕಾರ್ಮಿಕರೇ ಇರುವ ತಾವರೆಕಟ್ಟೆಮೋಳೆ ಗ್ರಾಮದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ ಬುಲೆಟ್ ಉಡುಗೊರೆ ನೀಡುವುದಾಗಿ ಬೆಂಬಲಿಗರು ಹಾಗೂ ಅಭಿಮಾನಿಗಳು ವಾಗ್ದಾನ ಮಾಡಿದ್ದರು. ಅದರಂತೆ ಪ್ರತಿಯೊಬ್ಬರು ಹಣವನ್ನು ಹಾಕಿ, ಸಂಗ್ರಹಿಸಿದ ಮೊತ್ತದಿಂದ ಜನನಾಯಕನಿಗೆ ಬುಲೆಟ್‍ನ್ನು ಊಡುಗೊರೆಯಾಗಿ ನೀಡಿದ್ದಾರೆ.