ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಭರ್ತಿಗೆ ನಿರ್ಬಂಧ ಹೇರಿ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ ರಾಜ್ಯ ಸರ್ಕಾರ ಅದೇಶಕ್ಕೆ ನಟ ಧ್ರುವ ಸರ್ಜಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತಾಗಿ ಚಿತ್ರರಂಗದ ತಾರೆಯರು ಧ್ವನಿ ಎತ್ತಿದ್ದಾರೆ.
ಮಾರ್ಕೆಟ್ ಗಿಜಿ ಗಿಜಿ ಜನ, ಬಸ್ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಶೇ.50 ನಿರ್ಬಂಧ ಎಂದು ನಟ ಧ್ರುವ ಸರ್ಜಾ ಪೋಸ್ಟ್ ಮಾಡುವ ಮೂಲಕವಾಗಿ ಅಭಿಯಾನವನ್ನು ಪ್ರಾರಂಭಿಸಿದ್ದರು. ಇದೀಗ ಇಡೀ ಚಿತ್ರರಂಗವೇ ಒಟ್ಟಾಗಿ ಸೋಷಿಯಲ್ ಮೀಡಿಯಾ ಮೂಲಕವಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
Advertisement
@drashwathcn @CMofKarnataka @mla_sudhakar #KFIrequestsfulloccupancy pic.twitter.com/S7rxIUlAPM
— Dhruva Sarja (@DhruvaSarja) February 3, 2021
Advertisement
ಖಾಸಗಿ ಕಾರ್ಯಕ್ರಮಗಳು, ದೇವಸ್ಥಾನ, ಚರ್ಚ್, ಮಸೀದಿ, ಮಾರ್ಕೆಟ್, ಸಾರ್ವಜನಿಕ ಸಾರಿಗೆಗಳು, ಪ್ರವಾಸೋದ್ಯಮಗಳು ಯಾಥಾವತ್ತಾಗಿ ತೆರೆದಿರುವಾಗ ಸಿನಿಮಾ ಥಿಯೇಟರ್‍ಗಳು ಯಾಕಿರಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
Advertisement
When private functions, places of worship, public transport, markets, tourist places are allowed to operate normally, Why not MOVIE THEATRES !?@drashwathcn @CMofKarnataka @mla_sudhakar #KFIDemandsFullOccupancy pic.twitter.com/wh96okEtOL
— Puneeth Rajkumar (@PuneethRajkumar) February 3, 2021
Advertisement
ಸಿನಿಮಾ ಕೆಲವರಿಗೆ ಎಂಟರ್ಟೈನ್‍ಮೆಂಟ್ ಆದರೆ ಇನ್ನು ಹಲವರಿಗೆ ಅದೇ ಜೀವಾಳವಾಗಿದೆ ಎಂದು ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ತೆದೆದುಕೊಂಡಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
While cinema is entertainment to most, it’s lifeline to many.#KFIdemandsFullOccupancy@drashwathcn @CMofKarnataka @mla_sudhakar pic.twitter.com/rkNjc8eWBX
— Prashanth Neel (@prashanth_neel) February 3, 2021
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಚಿತ್ರಮಂದಿರ ಶೇ.100 ಭರ್ತಿಗೆ ಅವಕಾಶ ನೀಡಬೇಕು. ಚಿತ್ರಮಂದಿರದ ನಾವೇಲ್ಲರೂ ಜೊತೆಯಲ್ಲಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು ಎಂದು ಹೇಳಿ ವೀಡಿಯೋ ಶೇರ್ ಮಾಡಿದ್ದಾರೆ.
We want 100% occupancy for our movie theatres. #KFIDemandsFullOccupancy pic.twitter.com/YTE7IrGZvq
— DrShivaRajkumar (@NimmaShivanna) February 3, 2021
ಇತರ ಎಲ್ಲ ಸಾರ್ವಜನಿಕ ಪ್ರದೇಶಗಳು ಜನಸಂದಣಿಯಿಂದ ಕೂಡಿದೆ. ಕರ್ನಾಟಕದಲ್ಲಿ ರಂಗಭೂಮಿಯನ್ನು 50% ಕ್ಕೆ ಮಾತ್ರ ಸೀಮಿತಗೊಳಿಸಿದೆ. ಏಕೆ? ಸಿನೆಮಾ ರಾಜ್ಯಾದ್ಯಂತ ಅನೇಕರಿಗೆ ಜೀವನೋಪಾಯದ ಸಾಧನವಾಗಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
While every other public area continues to bustle with people, Karnataka has once again limited the theatre occupancy to 50%. Why? Are we forgetting that cinema is a means of livelihood for many across the state!#KFIDemandsFullOccupancy @drashwathcn @CMofKarnataka @mla_sudhakar
— Rakshit Shetty (@rakshitshetty) February 3, 2021
ಬೀದಿಗಳು, ಬಸ್ಸುಗಳು, ಮಾಲ್‍ಗಳು, ಪಬ್‍ಗಳು ಮತ್ತು ಇತರ ಎಲ್ಲ ಸಾರ್ವಜನಿಕ ಪ್ರದೇಶಗಳು ಜನರಿಂದ ತುಂಬಿರುವಾಗ, ಕರ್ನಾಟಕ ಸರ್ಕಾರ 100% ಥಿಯೇಟರ್ ಆಕ್ಯುಪೆನ್ಸೀ ಘೋಷಣೆಯನ್ನು ಏಕೆ ಹಿಂತೆಗೆದುಕೊಂಡಿದೆ ನೆನಪಿರಲಿ ಪ್ರೇಮ್ ಪ್ರಶ್ನಿಸಿದ್ದಾರೆ.
When streets, buses, malls, pubs and every other public area is crowded with people, why has Karnataka Government withdrawn the 100% theatre occupancy declaration?#KFIDemandsFullOccupancy @drashwathcn @CMofKarnataka @mla_sudhakar pic.twitter.com/j0qpYYZqnp
— Prem Nenapirali (@StylishstarPrem) February 3, 2021
ಧನಂಜಯ್, ಧುನಿಯಾ ವಿಜಯ್, ಪ್ರೀತಮ್ ಗುಬ್ಬಿ, ಸಿಂಪಲ್ ಸುನಿ ಹೀಗೆ ಸಿನಿಮಾ ಮಂದಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.