ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಕ್ಕೂ ಮುನ್ನ ನಿನ್ನೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುವಂತೆ ದೈಹಿಕ ಕಸರತ್ತು ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಸದ್ಯ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಫ್ರಾ ಆರ್ಚರ್ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಪಂದ್ಯಕ್ಕೂ ಮುನ್ನ ಕೊಹ್ಲಿ ಬಹಳ ಸಂಭ್ರಮದಲ್ಲಿರುವ ವಿಡಿಯೋ ಅಭಿಮಾನ ಮನಗೆದ್ದಿತ್ತು. ಈ ವಿಡಿಯೋಗೆ ಹಲವು ನೆಟ್ಟಿಗರು ತಮ್ಮದೇ ಪ್ರತಿಕ್ರಿಯೆ ನೀಡಿ ವಿಡಿಯೋ ಶೇರ್ ಮಾಡಿದ್ದರು. ಇದೇ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಜೋಫ್ರಾ ಆರ್ಚರ್, ಹೋಗಿ ಬಾಗಿಲು ಹಾಕು ಎಂದು ಅವಳು ಹೇಳಿದಾಗ ಎಂದು ಪ್ರತಿಕ್ರಿಯೆ ನೀಡಿ ರೀ ಟ್ವೀಟ್ ಮಾಡಿದ್ದಾರೆ. ಸದ್ಯ ಕೊಹ್ಲಿ ವಿಡಿಯೋದೊಂದಿಗೆ ಆರ್ಚರ್ ಅವರ ಕಾಮೆಂಟ್ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿ ವಿರುದ್ಧ 1 ಬೌಂಡರಿ, 5 ಸಿಕ್ಸರ್ – ಟಿ-20 ಇತಿಹಾಸದಲ್ಲೇ ಗೇಲ್ ಹೊಸ ದಾಖಲೆ
Advertisement
When she tells you go and lock the door https://t.co/5bHI9FZxgD
— Jofra Archer (@JofraArcher) October 15, 2020
Advertisement
ಉಳಿದಂತೆ ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತನ್ನ ಸೋಲಿನ ಸರಣಿಗೆ ಬ್ರೇಕ್ ಹಾಕಿತ್ತು. ಆದರೆ ಪಂದ್ಯದಲ್ಲಿ ಇನ್‍ಫಾರ್ಮ್ ನಲ್ಲಿದ್ದ ಆಟಗಾರ ಎಬಿ ಡಿಲಿಯರ್ಸ್ ಅವರನ್ನು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತಂತೆ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, ನಾವು ಈ ಬಗ್ಗೆ ಮೊದಲೇ ಮಾತನಾಡಿಕೊಂಡಿದ್ದೇವು. ಎಬಿಡಿ ನಂ.6ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಗಮಿಸಿದ್ದು, ಎಡಗೈ-ಬಲಗೈ ಕಾಂಬಿನೇಷನ್‍ನ ಭಾಗವಾಗಿತ್ತು. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ಈ ನಿರ್ಧಾರಗಳಿಂದ ಹೊರಬರುವುದಿಲ್ಲ. ಆದರೆ ಪಂದ್ಯದಲ್ಲಿ ತಂಡ ಗಳಿಸಿದ್ದ 170 ರನ್ ಗಳ ಸ್ಕೋರ್ ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು. ಆರ್ ಸಿಬಿ ತಂಡ ಅಕ್ಟೋಬರ್ 17 ರಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಆರ್‌ಸಿಬಿಗಾಗಿ 200 ಪಂದ್ಯಗಳನ್ನಾಡಿ ದಾಖಲೆ ಬರೆದ ಕೊಹ್ಲಿ