ಬೆಂಗಳೂರು: ಯಾವುದೇ ಲಕ್ಷಣ ಇಲ್ಲದ ಹೋಂ ಐಸೋಲೇಷನ್‌ಗೆ ಒಳಗಾದವರು ಈ 5 ನಿಯಮಗಳನ್ನು ಅನುಸರಿಸಬೇಕೆಂದು ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಜ್ವರ ಹೆಚ್ಚಾದರೆ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ 14417ಕ್ಕೆ ಕರೆ ಮಾಡುವಂತೆ ಕೇಳಿಕೊಂಡಿದ್ದಾರೆ.
Advertisement
https://twitter.com/BBMPCOMM/status/1285154704851255296
Advertisement
5 ನಿಯಮಗಳನ್ನು ಪಾಲಿಸಿ
1. ಪ್ರತಿ ಗಂಟೆಗೆ ಒಮ್ಮೆ ದೇಹದ ಉಷ್ಣಾಂಶ ಪರೀಕ್ಷಿಸಿಕೊಳ್ಳಿ, ಜ್ವರ ಹೆಚ್ಚಾದರೆ ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡಿ
2. ನಿಮ್ಮ ಬಳಿ ಪಲ್ಸ್ ಆಕ್ಸಿಮೀಟರ್ ಇದ್ದರೆ ಪ್ರತೀ ಗಂಟೆಗೊಮ್ಮೆ ಪರೀಕ್ಷಿಸಿಕೊಳ್ಳಿ. ಆಮ್ಲಜನಕದ ಪ್ರಮಾಣ 95ಕ್ಕಿತ ಕಡಿಮೆ ಇದ್ದರೆ ತಕ್ಷಣ ಹತ್ತಿರದ ಹಿರಿಯ ಆರೋಗ್ಯ ಪರಿಶೀಲಕರಿಗೆ ಮಾಹಿತಿ ನೀಡಿ
Advertisement
3. ಪ್ರತಿ ಮೂರು ಗಂಟೆಗಳಿಗೊಮ್ಮೆ ಉಪ್ಪು ನೀರಿನಿಂದ ಗಾರ್ಗಲಿಂಗ್ ಮಾಡಿ
4. ಬಿಸಿಬಿಸಿ ಆಹಾರವವನ್ನೇ ಸೇವಿಸಿ. ಅದು ಫ್ರೆಶ್ ಆಗಿ ಸೇವಿಸುವಂತಿರಲಿ
5. ಮನೆಯಲ್ಲಿ ಐಸೋಲೇಟ್ ಆದಾಗ ಇತರೇ ಸದಸ್ಯರ ಸಂಪರ್ಕದಿಂದ ದೂರವಿರಿ.