ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆತಂಕಕಾರಿ ಸಂಗತಿ ಅಂದರೆ ಬೆಂಗಳೂರಿನಲ್ಲಿ ಹೊಸ ಹೊಸ ಏರಿಯಾಗಳಿಗೆ ಸೋಂಕು ಹಬ್ಬಲು ಶುರುವಾಗಿದೆ. ಈ ಮೂಲಕ ಗ್ರೀನ್‍ಝೋನ್, ಸೇಫ್ ಏರಿಯಾಗಳೆಂದು ಅನ್ನಿಸಿಕೊಂಡಿರುವ ಏರಿಯಾಗಳು ಕೊರೊನಾ ಅಡ್ಡಾಗಳಾಗಿ ಬದಲಾಗ್ತಾವಾ ಅನ್ನೋ ಆತಂಕ ಎದುರಾಗಿದೆ.
ಇದುವರೆಗೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಒಂದು ಎರಡು ದಾಖಲಾಗುತ್ತಿದ್ದವು. ಆದರೆ ಸೋಮವಾರ ಬರೋಬ್ಬರಿ 8 ಪ್ರಕರಣಗಳು ದಾಖಲಾಗಿವೆ. ಅಂತರಾಜ್ಯ ಪ್ರಯಾಣ ಮಾಡಿದವರಲ್ಲಿ, ಅಂತರರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಮತ್ತು ಬೆಂಗಳೂರಿನ ಸ್ಥಳೀಯರಲ್ಲಿ ಸೋಂಕು ಪತ್ತೆಯಾಗಿದೆ. ಪುಟ್ಟೆನಹಳ್ಳಿಯಲ್ಲಿ ಮೂರು, ಯಲಹಂಕ ನ್ಯೂ ಟೌನ್‍ನಲ್ಲಿ ಒಂದು, ನಾಗರಬಾವಿ ಒಂದು, ಲಕ್ಕಸಂದ್ರ ಮತ್ತು ಡಿಜೆ ಹಳ್ಳಿಯಲ್ಲಿ ತಲಾ ಒಂದೊಂದು ಕೇಸ್ ದಾಖಲಾಗಿವೆ.
Advertisement
Advertisement
ಪುಟ್ಟೆನಹಳ್ಳಿಯಲ್ಲಿ 54 ವರ್ಷದ ವೃದ್ಧನಿಗೆ ಸೋಂಕು ಪತ್ತೆಯಾಗಿದೆ. ಚೆನ್ನೈನಿಂದ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಅಪಾರ್ಟ್ ಮೆಂಟ್‍ನಲ್ಲಿ ವ್ಯಕ್ತಿಯ ಜೊತೆ ಇದ್ದ ಹೆಂಡತಿ, ಮಗ ಮತ್ತು ಮಗಳಿಗೆ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಕಾರಿನಲ್ಲಿ ಬಂದ 54 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಜೊತೆಗೆ ಯಲಹಂಕ ನ್ಯೂಟೌನ್ ವ್ಯಕ್ತಿಗೆ ಕೊರೊನಾ ವಕ್ಕರಿಸಿದ್ದಾನೆ. ಇವರೆಲ್ಲರನ್ನ ಕ್ವಾರಂಟೈನ್ ಮಾಡಿದ್ದರು. ಕ್ವಾರಂಟೈನ್ ಮಾಡಿದ ಐದು ದಿನದಲ್ಲಿ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ.
Advertisement
ಲಕ್ಕಸಂದ್ರದಲ್ಲಿ ಪತ್ನಿಯಿಂದಲೇ ಪತಿಗೆ ಸೋಂಕು ತಗುಲಿದೆ. ರಾಮನಗರ ಮೂಲದ ಮಹಿಳೆ ಕ್ಯಾನ್ಸರ್ ಚಿಕಿತ್ಸೆಗೆ ಅಂತ ಬೆಂಗಳೂರಿನ ತಂಗಿ ಮನೆಯಲ್ಲಿ ಉಳಿದಿದ್ದರು. ಅವರಿಗೆ ಸೋಂಕು ಕಾಣಿಸಿಕೊಂಡು ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಪತಿಗೂ ಸೋಂಕು ಕಾಣಿಸಿಕೊಂಡಿದೆ.
Advertisement
ಗ್ರೀನ್ ಝೂನ್ ವಾರ್ಡ್ ಆಗಿದ್ದ ಡಿ.ಜೆ.ಹಳ್ಳಿಯಲ್ಲಿ ಮುಸ್ಲಿಂ ಮಹಿಳೆಗೆ ಪಾಸಿಟಿವ್ ಬಂದಿದೆ. ಈ ಮೂಲಕ ಈಗ ಕಂಟೈನ್ಮೆಂಟ್ ಝೂನ್ ಆಗಿದೆ. ಈಕೆಯ ಟ್ರಾವೆಲ್ ಹಿಸ್ಟರಿಯೇ ಆರೋಗ್ಯ ಇಲಾಖೆಗೆ ತಿಳಿದಿಲ್ಲ. ಯಾರೆಲ್ಲಾ ಸಂಪರ್ಕದಲ್ಲಿ ಇದ್ದಾರೋ ಎಂಬ ಆತಂಕ ಶುರುವಾಗಿದೆ. ಪಾದರಾಯನಪುರದಲ್ಲಿ ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ.