ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಸೈಕಲ್ ಖರೀದಿಸಿದ್ದಾರೆ.
ಹೊಸ ಸೈಕಲ್ ಖರೀದಿಸಿದ ಖುಷಿಯಲ್ಲಿ ಸಿದ್ದರಾಮಯ್ಯನವರು ಮನೆಯಿಂದ ಹೊರಗೆ ರೈಡಿಂಗ್ ಮಾಡಿದ್ದಾರೆ. ಬುಧವಾರ ರಾತ್ರಿ ಶಿವಾನಂದ ಸರ್ಕಲ್ ನಲ್ಲಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಹೊಸ ಸೈಕಲ್ ಆಗಮನವಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್ ಕೂಡ ಇದ್ದರು.
ಸಿದ್ದರಾಮಯ್ಯನವರು ಸೈಕಲ್ ಹೊಡೆಯೋದನ್ನು ವಿಡಿಯೋ ಮಾಡಿಕೊಂಡಿರುವ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಟಿಕ್‍ಟಾಕ್ ನಲ್ಲಿ ಟಗರು ಸಿನಿಮಾದ ಹಾಡು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಹಾಡು ಸೇರಿಸಿ ಖುಷಿ ಪಡುತ್ತಿದ್ದಾರೆ.