ಹೊಸ ಶೈಕ್ಷಣಿಕ ಅವಧಿಗೆ ಪಠ್ಯಕ್ರಮ ಇಳಿಕೆ ಸಾಧ್ಯತೆ – ಸಲಹೆ ನೀಡುವಂತೆ ಸಚಿವ ರಮೇಶ್ ಪೊಖ್ರಿಯಾಲ್ ಮನವಿ

Public TV
1 Min Read
Ramesh Pokriyala e1591700332536

ನವದೆಹಲಿ: 2020-2021ರ ಅವಧಿಯ ಹೊಸ ಶೈಕ್ಷಣಿಕ ವರ್ಷ ಆರಂಭಿಸುವ ಸಿದ್ಧತೆಯಲ್ಲಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಒಂದು ವರ್ಷದ ಅವಧಿಗೆ ಮೂರು ತಿಂಗಳ ಪಠ್ಯಕ್ರಮ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಸೂಕ್ತ ಸಲಹೆಗಳನ್ನು ನೀಡುವಂತೆ ಶಿಕ್ಷಕರಿಗೆ ಮನವಿ ಮಾಡಿದೆ.

ದೇಶದ್ಯಾಂತ ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆ ಶಾಲೆಗಳನ್ನು ಪುನಾರಂಭಿಸಲು ಪೋಷಕರ ವಿರೋಧ ಕೇಳಿ ಬಂದಿತ್ತು. ಇದಕ್ಕಾಗಿ ಅಗಸ್ಟ್ ಬಳಿಕ ಶಾಲಾ ಕಾಲೇಜುಗಳು ಆರಂಭಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವ ಕೇಂದ್ರ ಪಠ್ಯಕ್ರಮ ಇಳಿಕೆ ಮಾಡಲು ಚಿಂತಿಸಿದೆ.

Ramesh Pokriyala 2 e1591700350900

ಆಗಸ್ಟ್ ಬಳಿಕ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಮೂರು ತಿಂಗಳು ಕಡಿಮೆ ಆಗಬಹುದು. ಇದರಿಂದ ಹೆಚ್ಚು ಪಠ್ಯಕ್ರಮ ಮಕ್ಕಳು ಮತ್ತು ಶಿಕ್ಷಕರ ಮೇಲೆ ಹೊರೆಯಾಗಬಹುದು. ಕೊರೊನಾ ದೃಷ್ಟಿಯಿಂದ ಮಕ್ಕಳು ಹೆಚ್ಚು ಶಾಲೆಯಲ್ಲಿ ಇರುವುದು ಒಳಿತಲ್ಲ. ಈ ಹಿನ್ನಲೆ ಪಠ್ಯಕ್ರಮ ಹಾಗೂ ಶಾಲಾ ಕಾಲೇಜು ಸಮಯದ ಇಳಿಕೆ ಬಗ್ಗೆ ಪೋಷಕರು ಮನವಿ ಮಾಡಿದ್ದಾರೆ.

ಈ ಮನವಿಗೆ ಸ್ಪಂದಿಸಿರುವ ಸಚಿವ ರಮೇಶ ಪೋಖ್ರಿಯಾಲ್ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಫೇಸ್ ಬುಕ್, ಟ್ವಿಟರ್ ಖಾತೆಗೆ ಟ್ಯಾಗ್ ಅಥವಾ ಕಮೆಂಟ್ ಮೂಲಕ ಪಠ್ಯಕ್ರಮ ಇಳಿಕೆ ಮಾಡುವ ಬಗ್ಗೆ ಸಲಹೆ, ಅಭಿಪ್ರಾಯ ನೀಡುವಂತೆ ಶಿಕ್ಷಕರು, ಶಿಕ್ಷಣ ತಜ್ಞರಿಗೆ ಮನವಿ ಮಾಡಿದ್ದಾರೆ.

Ramesh Pokriyala 1

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಬರುವ ಸಲಹೆಗಳನ್ನು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದ್ದು ಸಿಬಿಎಸ್‍ಸಿ ಪಠ್ಯಕ್ರಮದಲ್ಲಿ ಮೂರು ತಿಂಗಳಷ್ಟು ಪಠ್ಯವನ್ನು ಕಡಿತ ಮಾಡುವ ಎಲ್ಲ ಸಾಧ್ಯತೆಗಳಿವೆ. ಇನ್ನು ರಾಜ್ಯ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಲು ಸಾಧ್ಯತೆ ಇದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *