– ಹೊಸ ಕ್ಯಾಲೆಂಡರ್ ನಲ್ಲಿ ಏನಿದೆ?
ಬೆಂಗಳೂರು: ಹೊಸ ವರ್ಷಕ್ಕೆ ನಿರ್ದೇಶಕ ಕೃಷ್ಣವರು 2021ರ ಕ್ಯಾಲೆಂಡರ್ ವಿಭಿನ್ನವಾರಿಗಬೇಕು ಎಂಬ ದೃಷ್ಟಿಯಿಂದ ಕ್ಯಾಲೆಂಡರ್‍ವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಯಾಲೆಂಡರ್ ಹೊಂದಿರುವ ವಿಶೇಷತೆಯಿಂದ ಸುದ್ದಿಯಲ್ಲಿದೆ.
ಕ್ಯಾಲೆಂಡರ್ ಎಂದರೆ ಫೋಟೋ, ಚಿತ್ತಾರಗಳು ತುಂಬಿರುತ್ತವೆ. ಆದರೆ ಈ ಕ್ಯಾಲೆಂಡರ್ ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ. ವಿಕಲಚೇತನರ ವಿಶಿಷ್ಟ ಸಾಧನೆಯನ್ನು ಪರಿಚಯಿಸುವ ಉತ್ತಮವಾದ ಒಂದು ಆಲೋಚನೆಯಿಂದ ಈ ಕ್ಯಾಲೆಂಡರ್ ರೂಪಿಸಿದ್ದಾರೆ.
Advertisement
Advertisement
ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ವಿಕಲಚೇತನ ಕ್ರೀಡಾಪಟುಗಳು, ಮಾಡೆಲ್ ಅವರ ಕಿರುಪರಿಚಯವನ್ನು 2021ರ ಕ್ಯಾಲೆಂಡರ್ ಒಳಗೊಂಡಿದೆ. ಇದರಿಂದ ತಿಂಗಳಿಗೆ ಒಬ್ಬೊಬ್ಬರ ಕಿರುಪರಿಚಯ ಹಾಗೂ ಅವರ ಸಾಧನೆಗಳ ಕುರಿತಾಗಿ ತಿಳಿದರೆ ಅವರೆಗೆ ಸ್ಫೂರ್ತಿ ನೀಡುತ್ತದೆ ಎಂಬ ಉತ್ತಮ ದೃಷ್ಟಿಕೋನದಿಂದ ಈ ಕ್ಯಾಲೆಂಡರ್ ನಿರ್ಮಾಣವಾಗಿದೆ.
Advertisement
Advertisement
ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಕ್ ಶರತ್ ಗಾಯಾಕ್ವಾಡ್, ಅಡ್ವೆಂಚರ್ ಟೂರಿಸ್ಟ್, ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು ಮತ್ತು ಡಾನ್ಸ್ರ್ ಜಯಂತ್, ಕ್ರಿಕೆಟರ್ಸ್ ಅಶ್ವಿನಿ ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೆರಿಂದೆ ಇನ್ನು ಅನೇಕರ ಸಾಧನೆಯ ಕುರಿತಾಗಿ ಈ ಕ್ಯಾಲೆಂಡರ್ ಒಳಗೊಂಡಿದೆ.
When people are finding it difficult to overcome trauma of disability. My brother @saggy953645 has decided Motivate,Inspire N Help others thru #InvokeFoundation (NGO) wit passionate team of people who work towards Empowering & Strengthening Disability Inclusion,Diversity&Equality pic.twitter.com/6onYkObKum
— ಕೃಷ್ಣ / Krishna (@krisshdop) December 31, 2020
ಇಂಥಹ ಒಂದು ಉತ್ತಮ ಆಲೋಚನೆಯೊಂದಿಗೆ ಕ್ಯಾಲೆಂಡರ್ ಅನ್ನು ಇನ್ವೋಕ್ ಫೌಂಡೇಶನ್ ಮಾಡಿದೆ. ಈ ಸಂಸ್ಥೆಯ ಸಾಗರ್ ಗೆ ಅಪಘಾತದಲ್ಲಿ ಬಲವಾದ ಪೆಟ್ಟ ಬಿದ್ದಿತ್ತು. ಈ ಹಿನ್ನೆಯಲ್ಲಿ ಸಂಸ್ಥೆಯು ಹುಟ್ಟಿಕೊಂಡಿತ್ತು. ಈ ಸಂಸ್ಥೆಯಿಂದ ಈ ಕ್ಯಾಲೆಂಡರ್ ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಸಾಗರ್ ಪರಿಶ್ರಮದ ಕುರಿತಾಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.