ವಿಜಯಪುರ: ಹೊಸ ವರ್ಷಾಚರಣೆ ಅಂಗವಾಗಿ ಕ್ಷುಲ್ಲಕ ಕಾರಣಕ್ಕಾಗಿ ಯುವಕರಿಬ್ಬರ ಮಧ್ಯೆ ಗಲಾಟೆ ನಡೆದು ಯುವಕನಿಗೆ ತಲವಾರ್‍ನಿಂದ ಇರಿದ ಘಟನೆ ವಿಜಯಪುರ ನಗರದ ಅತಾಲ್ ಚೌಕ್ ಬಳಿ ಘಟನೆ ನಡೆದಿದೆ.
ಇರಿತಕ್ಕೊಳಗಾದವನನ್ನು ಫಯಾಜ್ ಎಂದು ಗುರುತಿಸಲಾಗಿದೆ. ನಗರದ ಇಸ್ಮಾಯಿಲ್ ಎಂಬಾತ ಫಯಾಜ್ ಗೆ ತಲವಾರದಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆಂಬ ಆರೋಪ ಕೇಳಿಬಂದಿದೆ.
ಸದ್ಯ ಫಯಾಜ್ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಮದು ವೈದ್ಯರು ತಿಳಿಸಿದ್ದಾರೆ. ಈ ಘಟನೆಗೆ ಹಳೇ ವೈಷಮ್ಯ ಕಾರಣ ಎಂದು ತಿಳಿದು ಬಂದಿದೆ.
ಯುವಕರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನಿಗೆ ಮಾರಕಾಸ್ತ್ರದಿಂದ ಇರಿಯಲಾಗಿದೆ. ಗೋಲಗುಮ್ಮಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.