ಬೆಂಗಳೂರು: ರಾಜ್ಯದಲ್ಲಿ ಪ್ರತಿ ಬಾರಿ ಹೊಸ ವರ್ಷಾಚರಣೆಯನ್ನು ಗುಂಡು ಪಾರ್ಟಿಗಳಿಂದ ಸ್ವಾಗತಿಸಿ ಅಬಕಾರಿ ಇಲಾಖೆಗೆ ಬಾರಿ ಲಾಭ ತರಿಸುತ್ತಿದ್ದ ಮದ್ಯ ಪ್ರಿಯರು ಈ ಬಾರಿ ನಿರಾಸೆ ಮೂಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಕಾರಣದಿಂದ ಹೊಸ ವರ್ಷದ ಆಚರಣೆಗೆ ಕಟ್ಟುನಿಟ್ಟಿನ ಕ್ರಮಗಳಿದ್ದವು. ಆ ಕ್ರಮದಂತೆ ರಾತ್ರಿ 11.30ಕ್ಕೆ ಮದ್ಯದಂಗಡಿ ಮುಚ್ಚಲಾಗಿತ್ತು. ಹಾಗಾಗಿ ಈ ಬಾರಿ ಅಬಕಾರಿ ಇಲಾಖೆಗೆ ಭಾರೀ ನಷ್ಟವಾಗಿದೆ.
Advertisement
ಕಳೆದ ವರ್ಷ ಶೇ.20 ರಷ್ಟು ಆದಾಯ ಏರಿಕೆ ಕಂಡಿತ್ತು. ಆದರೆ ಈ ಬಾರಿ ಗಣನೀಯ ಕುಸಿತ ಕಂಡಿರುವುದರಿಂದ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ಅಬಕಾರಿ ಇಲಾಖೆಗೆ ಹೊಡೆತ ನೀಡಿದೆ.
Advertisement
Advertisement
ಕಳೆದ ವರ್ಷ ಡಿ.31ರಂದು 300 ಕೋಟಿ ರೂಪಾಯಿ ಆದಾಯ ಗಳಿಸಿದ್ದ ಅಬಕಾರಿ ಇಲಾಖೆ ಈ ಬಾರಿ 150 ಕೋಟಿ ರೂಪಾಯಿ ಮಾತ್ರ ಗಳಿಸಿಕೊಂಡಿದೆ. ನಿನ್ನೆ ರಾಜ್ಯದಲ್ಲಿ 1.7 ಲಕ್ಷ ಬಾಕ್ಸ್ ಬಿಯರ್ ಮಾರಾಟಗೊಂಡಿದ್ದರೆ, 2.23 ಲಕ್ಷ ಬಾಕ್ಸ್ ಐಎಂಎಫ್‍ಎಲ್ ಮಾರಾಟವಾಗಿದೆ.
Advertisement
ಹೊಸ ವರ್ಷದ ಹಿಂದಿನ ದಿನ ಡಿಸೆಂಬರ್ 30 ರಂದು ರಾಜ್ಯದಲ್ಲಿ ಕೇವಲ 50 ಕೋಟಿ ಮದ್ಯ ಮಾತ್ರ ಮಾರಾಟವಾಗಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ಹೆಚ್ಚಿನ ಮದ್ಯ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಕರ್ಫ್ಯೂನಿಂದಾಗಿ ಮದ್ಯ ಮಾರಾಟ ಕಡಿಮೆಯಾಗಿದೆ. ಇದರಿಂದ ಆದಾಯವು ಕಡಿಮೆಯಾಗಿದೆ.