ನವದೆಹಲಿ: ಹೊಸ ಯೂಟ್ಯೂಬ್ ಚಾನೆಲ್ ತೆರೆದ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕಾಲೆಳೆದಿದ್ದಾರೆ.
ಡೇವಿಡ್ ವಾರ್ನರ್ ಅವರು ಸದ್ಯ ಯುಇಎಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ತನ್ನ ನಾಯಕತ್ವದ ಸನ್‍ರೈಸಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ನಿನ್ನೆ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡ 69 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.
Hey everyone- I’ve just launched my new YouTube channel. The first ep Bull’s Day Care is up now so hit the link in my bio to watch and don’t forget to subscribe and follow along each week. #youtube https://t.co/TcRLWk6Gjj
— David Warner (@davidwarner31) October 9, 2020
ಈ ನಡುವೆ ಇಂದು ಟ್ವೀಟ್ ಮಾಡಿರುವ ಡೇವಿಡ್ ವಾರ್ನರ್ ಅವರು, ಎಲ್ಲರಿಗೂ ನಮಸ್ಕಾರ, ನಾನು ಈಗ ತಾನೇ ನನ್ನ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿದ್ದೇನೆ. ಜೊತೆಗೆ ಹೊಸ ವಿಡಿಯೋವನ್ನು ಅದರಲ್ಲಿ ಹಾಕಿದ್ದೇನೆ. ನನ್ನ ಟ್ವಿಟ್ಟರಿನಲ್ಲಿ ಆ ಯೂಟ್ಯೂಬ್ ಚಾನೆಲಿನ ಲಿಂಕ್ ಇದ್ದು, ಎಲ್ಲರೂ ಹೋಗಿ ವಿಡಿಯೋ ನೋಡಿ. ಜೊತೆಗೆ ಫಾಲೋ ಮಾಡುವುದನ್ನು ಮರೆಯಬೇಡಿ ಎಂದು ಬರೆದುಕೊಂಡಿದ್ದರು.
I really hope your dancing videos are in there ????
— Yuvraj Singh (@YUVSTRONG12) October 9, 2020
ಡೇವಿಡ್ ವಾರ್ನರ್ ಅವರ ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, ಹೌದಾ. ಆದರೆ ಈ ಯೂಟ್ಯೂಬ್ ಚಾನೆಲ್ ಅಲ್ಲಿ ನಿಮ್ಮ ಡ್ಯಾನ್ಸ್ ವಿಡಿಯೋ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ. ಡೇವಿಡ್ ವಾರ್ನರ್ ಅವರು ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಕೊರೊನಾ ಲಾಕ್‍ಡೌನ್ ವೇಳೆ ಟಿಕ್‍ಟಾಕ್‍ನಲ್ಲಿ ಬಹಳ ಜನಪ್ರಿಯವಾಗಿದ್ದ ಡೇವಿಡ್ ವಾರ್ನರ್ ಕೆಲ ಹಿಂದಿ, ತಮಿಳು ಮತ್ತು ತೆಲುಗು ಚಿತ್ರದ ಟಿಕ್‍ಟಾಕ್ ವಿಡಿಯೋ ಮಾಡಿ ಭಾರತದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಿಂದಿ ಹಾಡುಗಳಿಗೆ ಫನ್ನಿ ಡ್ಯಾನ್ಸ್ ಮಾಡಿ ತಮ್ಮ ಟಿಕ್‍ಟಾಕಿನಲ್ಲಿ ಹಾಕಿಕೊಂಡಿದ್ದರು. ತಮ್ಮ ಮಗಳ ಮನವಿಯ ಮೇರೆಗೆ ಟಿಕ್‍ಟಾಕ್‍ಗೆ ಬಂದಿದ್ದ ವಾರ್ನರ್ ಕೆಲ ದಿನಗಳ ನಂತರ ಟಿಕ್‍ಟಾಕ್‍ನಲ್ಲಿ ಸ್ಟಾರ್ ಆಗಿದ್ದರು.