ನವದೆಹಲಿ: ‘ಹೊಸ ಥಾರ್’ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ಬುಕ್ಕಿಂಗ್ ದಾಟಿದೆ ಎಂದು ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ತಿಳಿಸಿದೆ.
ಥಾರ್‍ನ ಬೇಡಿಕೆಯನ್ನು ಪೂರೈಸಲು ಮತ್ತು ಗ್ರಾಹಕರಿಗೆ ಕಾಯುವಿಕೆ ಅವಧಿಯನ್ನು ಕಡಿಮೆ ಮಾಡಲು ಕಂಪನಿಯು ನಾಸಿಕ್‍ನಲ್ಲಿರುವ ತನ್ನ ಘಟಕದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ.
Advertisement
Advertisement
2.2-ಲೀಟರ್ ಎಂ-ಹಾಕ್ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಎಂ-ಸ್ಟಾಲಿಯನ್ ಪೆಟ್ರೋಲ್ ಎಂಜಿನ್‍ನಲ್ಲಿ ಹೊಸ ಥಾರ್ ಲಭ್ಯವಿದೆ. ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.
Advertisement
ಮಹೀಂದ್ರ ಥಾರ್ ಸುರಕ್ಷತೆಯಲ್ಲಿ ಗ್ಲೋಬಲ್ ಎನ್‍ಕ್ಯಾಪ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಥಾರ್ ಪೆಟ್ರೋಲ್ ಅವತರಣಿಕೆ ರೂ 12.10 – 13.95 ಲಕ್ಷದವರೆಗೆ ಇದ್ದರೆ, ಡೀಸೆಲ್ ಅವತರಣಿಕೆ ರೂ 12.30 – 14.15 ಲಕ್ಷದವರೆಗೆ(ಎಕ್ಸ್-ಶೋರೂಂ) ಇದೆ.