ಬೆಂಗಳೂರು: ಎರಡು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಿ ಬಿ ಫಾರಂ ಸಹ ನೀಡಿದೆ. ಬೆಳಗಾವಿ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ಸಿದ್ಧತೆ ನಡೆಸಿಕೊಂಡಿದ್ದು, ಅಂತಿಮ ಘೋಷಣೆ ಬಾಕಿ ಇದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವತಃ ಹೊಸ ಸವಾಲು ಸ್ವೀಕರಿಸಿದ್ದು, ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರನ್ನ ಗೆಲ್ಲಿಸಿಕೊಂಡು ಬರುವ ಟಾಸ್ಕ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಯಾಕೆ ಈ ಹೊಸ ಟಾಸ್ಕ್?:
ಮಾಜಿ ಸಚಿವರ ಸಿಡಿ ಕೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿದೆ. ಈ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಇದೇ ವಿಷಯ ವಿಧಾನಸೌಧದಲ್ಲಿಯೂ ಪ್ರಸ್ತಾಪ ಆಗಿತ್ತು. ಈ ಗೊಂದಲವನ್ನ ನಿವಾರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮುಂದಾದಂತೆ ಕಾಣಿಸುತ್ತಿದೆ. ಮುಯ್ಯಿಗೆ ಮುಯ್ಯಿ ಲೆಕ್ಕಾಚಾರವೆಲ್ಲ ಮುಗಿತು. ಇನ್ನೇನಿದ್ದರೂ ಪಾರ್ಟಿ ಕಮಿಟ್‍ಮೆಂಟ್. ರಮೇಶ್ ಜಾರಕಿಹೊಳಿ ಪ್ರಕರಣದಿಂದಾದ ಗೊಂದಲವನ್ನು ಸತೀಶ್ ಜಾರಕಿಹೊಳಿ ಗೆಲುವಿನ ಮೂಲಕ ನಿವಾರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಅನ್ನೋ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಇದನ್ನೂ ಓದಿ: ಮಾಸ್ಟರ್ ಮೈಂಡ್, ರಿಂಗ್‌ಮಾಸ್ಟರ್ ಒಂದೇ ಫ್ರೇಮ್‌ನಲ್ಲಿ – ಡಿಕೆಶಿಗೆ ಬಿಜೆಪಿ ಡಿಚ್ಚಿ
Advertisement
Advertisement
ಸತೀಶ್ ಜಾರಕಿಹೊಳಿ ಅವರನ್ನ ಗೆಲ್ಲಿಸಿಕೊಂಡು ಬರುವ ಮೂಲಕ ಸಿಡಿ ಸಿಡಿತದಲ್ಲಿ ಆದ ಮುಜುಗರವನ್ನ ಬೆಳಗಾವಿಯ ಉಪ ಚುನಾವಣಾ ಅಖಾಡದಲ್ಲಿ ಸರಿ ಪಡಿಸಿಕೊಳ್ಳುವುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ. ಇತ್ತ ಬಿಜೆಪಿ ಸಹ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನ ಅಂತಿಮಗೊಳಿಸಿಲ್ಲ. ಇದನ್ನೂ ಓದಿ: ಡಿಕೆಶಿಗೆ ಡಿಚ್ಚಿ ಕೊಟ್ಟ ಬಿಜೆಪಿಗೆ ಕಾಂಗ್ರೆಸ್ ಗುದ್ದು