– ಹೊಸ, ಯುವ ಮುಖಗಳಿಗೆ ಆದ್ಯತೆ ನೀಡಲು `ಹೈ’ ಪ್ಲಾನ್
– 60:40 ಸೂತ್ರದಲ್ಲಿ ಹೊಸ ಕ್ಯಾಬಿನೆಟ್ ರಚನೆ
ನವದೆಹಲಿ/ಬೆಂಗಳೂರು: ಇಂದು ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಹೊಸ ಕ್ಯಾಬಿನೆಟ್ ರಚನೆ ಸಂಬಂಧ ಚರ್ಚೆ ನಡೆಯಲಿದೆ.
ಹೊಸ ಮುಖ್ಯಮಂತ್ರಿ ನೇಮಕ ಮಾಡುವುದರ ಜೊತೆಗೆ ಹೊಸ ಕ್ಯಾಬಿನೆಟ್ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಭವಿಷ್ಯದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಯಾಬಿನೆಟ್ ರಚನೆಗೆ ಮುಂದಾಗಿರುವ ಹೈಕಮಾಂಡ್ ಈಗಾಗಲೇ ಆಯ್ಕೆಗೆ ಕೆಲ ಮಾನದಂಡಗಳನ್ನು ಹಾಕಿದೆ.
ಮಾನದಂಡ ಏನು?
ಸಂಪುಟ ಸೇರಲು ಕ್ಲೀನ್ ಇಮೇಜ್ ಹೊಂದಿರಬೇಕು. ಜಾತಿವಾರು, ಪ್ರಾದೇಶಿಕವಾರು ಆಧಾರದಲ್ಲಿ ಯುವ ಮುಖಗಳಿಗೆ ಆದ್ಯತೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಸೇರಿ ಯಾವುದೇ ಆರೋಪ ಇರಬಾರದು. ಪಕ್ಷಕ್ಕೆ 10-15 ವರ್ಷ ದುಡಿಯಬಲ್ಲ ಯಂಗ್ ಟೀಮ್‍ಗೆ ಅವಕಾಶ ನೀಡಬೇಕು. ಸರ್ಕಾರಕ್ಕೆ ಇಮೇಜ್, ಪಕ್ಷದ ವರ್ಚಸ್ಸು ಹೆಚ್ಚಿಸುವ ಯುವ ಮುಖಗಳಿಗೆ ಆದ್ಯತೆ ಜೊತೆಗೆ ಶಿಕ್ಷಣ, ಸಂಘಟನಾ ಚತುರತೆ, ಜನರ ನಡುವೆ ಬೆರೆಯುವ ನಾಯಕನಿಗೆ ಅವಕಾಶ. ಇದನ್ನೂ ಓದಿ : ನಾನು ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ನಿರಾಣಿ
40:60ರ ಸೂತ್ರ:
ಪ್ರತಿ ಬಾರಿ ಕ್ಯಾಬಿನೆಟ್‍ನಲ್ಲಿ ಸಾಧಾರಣವಾಗಿ ಹಿರಿಯರಿಗೆ ಮಣೆ ಹಾಕಲಾಗುತ್ತದೆ. ಆದರೆ ಈ ಬಾರಿ ಶೇ.40ರಷ್ಟು ಮಂದಿ ಹಿರಿಯರು, ಶೇ.60ರಷ್ಟು ಮಂದಿ ಯುವ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಹಿರಿಯ ಸಚಿವರಿಗೆ ಕೊಕ್?
* ಈಶ್ವರಪ್ಪ, ಶಿವಮೊಗ್ಗ
* ಜಗದೀಶ್ ಶೆಟ್ಟರ್, ಧಾರವಾಡ ಕೇಂದ್ರ
* ಸುರೇಶ್‍ಕುಮಾರ್, ರಾಜಾಜಿನಗರ, ಬೆಂಗಳೂರು
* ಸೋಮಣ್ಣ, ಗೋವಿಂದರಾಜನಗರು, ಬೆಂಗಳೂರು
* ಲಕ್ಷ್ಮಣ ಸವದಿ, ಮೇಲ್ಮನೆ ಸದಸ್ಯ
* ಸಿ.ಸಿ. ಪಾಟೀಲ್, ನರಗುಂದ
* ಪ್ರಭು ಚವ್ಹಾಣ್, ಔರಾದ್
* ಶಶಿಕಲಾ ಜೊಲ್ಲೆ, ನಿಪ್ಪಾಣಿ
ವಲಸಿಗರಿಗೆ ಕೊಕ್?
* ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು
* ಶ್ರೀಮಂತಪಾಟೀಲ್, ಕಾಗವಾಡ
* ಶಂಕರ್, ಮೇಲ್ಮನೆ ಸದಸ್ಯ
* ನಾರಾಯಣಗೌಡ, ಕೆ.ಆರ್.ಪೇಟೆ
ಯಾರಿಗೆ ಖಾತೆ?
* ಬಾಲಚಂದ್ರ ಜಾರಕಿಹೊಳಿ, ಅರಭಾವಿ
* ಚಂದ್ರಪ್ಪ, ಹೊಳಲ್ಕೆರೆ
* ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು
* ಅಪ್ಪಚ್ಚು ರಂಜನ್, ಮಡಿಕೇರಿ
* ಸುನೀಲ್ ಕುಮಾರ್, ಕಾರ್ಕಳ
* ರಾಜೂಗೌಡ, ಸುರಪುರ
* ಪಿ.ರಾಜೀವ್, ಕುಡಚಿ
* ದತ್ತಾತ್ರೇಯ ಪಾಟೀಲ್, ಕಲಬುರಗಿ ದಕ್ಷಿಣ
* ಸತೀಶ್ ರೆಡ್ಡಿ, ಬೊಮ್ಮನಹಳ್ಳಿ
* ಮುನಿರತ್ನ, ಆರ್ ಆರ್ ನಗರ
* ಶಿವನಗೌಡ ನಾಯಕ್, ದೇವದುರ್ಗ
* ಹಾಲಪ್ಪ ಆಚಾರ್, ಯಲಬುರ್ಗಾ
* ಕುಮಾರ ಬಂಗಾರಪ್ಪ, ಸೊರಬ
* ಬಿಸಿ ನಾಗೇಶ್, ತಿಪಟೂರು
* ಎಂ ಪಿ ಕುಮಾರಸ್ವಾಮಿ, ಮೂಡಿಗೆರೆ
* ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ
* ಎಎಸ್ ಪಾಟೀಲ್ ನಡಹಳ್ಳಿ, ಮುದ್ದೆಬಿಹಾಳ
ಬಿಎಸ್‍ವೈ ಸಂಪುಟದಲ್ಲಿದ್ದ ಯಾರಿಗೆ ಚಾನ್ಸ್?
ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಮಾಧುಸ್ವಾಮಿ, ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಅಂಗಾರ
ವಲಸಿಗ ಕೋಟಾ:
ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಭೈರತಿ ಬಸವರಾಜು, ಶಿವರಾಂ ಹೆಬ್ಬಾರ್, ಬಿ.ಸಿ.ನಾಗೇಶ್