ಬೆಂಗಳೂರು: ಹೊಸ ಕೊರೊನಾ ಆತಂಕದ ನಡುವೆ ಇಂದು ಬೆಳಗ್ಗೆ 5.30ಕ್ಕೆ ಬೆಂಗಳೂರಿಗೆ ಬ್ರಿಟನ್ ವಿಮಾನ ಲ್ಯಾಂಡ್ ಆಗಿದೆ. ಒಟ್ಟು 243 ಪ್ರಯಾಣಿಕರು ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದು, ಆರೋಗ್ಯ ಇಲಾಖೆ ಎಲ್ಲರಿಗೂ ಆರ್.ಟಿ.ಪಿಸಿಆರ್ ಟೆಸ್ಟ್ ಮಾಡುತ್ತಿದೆ. ಆರ್.ಟಿ.ಪಿಸಿಆರ್ ವರದಿ ಬರೋವರೆಗೂ ಪ್ರಯಾಣಿಕರು ಟರ್ಮಿನಲ್ ಬಿಟ್ಟು ಹೋಗದಂತೆ ಸೂಚನೆ ನೀಡಲಾಗಿದೆ.
Advertisement
ಕೋವಿಡ್ ಟೆಸ್ಟ್‍ಗೆ 150 ಸಿಬ್ಬಂದಿ ನಿಯೋಜನೆ ಮಾಡಿದ್ದು, ಬೆಳಗ್ಗೆ 10 ಗಂಟೆವರೆಗೂ ಟೆಸ್ಟಿಂಗ್, ಸ್ಕ್ರೀನಿಂಗ್ ನಡೆಯಲಿದೆ. ಎಲ್ಲ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ಆಗಲು ಅಧಿಕಾರಿಗಳು ಸೂಚಿಸಿದ್ದು, ಪಾಸಿಟಿವ್ ಬಂದವರನ್ನ ವಿಕ್ಟೋರಿಯಾ, ಆಕಾಶ್ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ.
Advertisement
Advertisement
ಪ್ರಯಾಣಿಕರ ಕೊರೊನಾ ವರದಿ ಪಾಸಿಟಿವ್ ಬಂದಲ್ಲ, ಅವರ ಸ್ಯಾಂಪಲ್ ಗಳನ್ನ ಜೆನಿಟಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ನೆಗೆಟಿವ್ ವರದಿ ಬಂದವರಿಗೂ ಸೀಲ್ ಹಾಕಿ, ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದು ದೇವನಹಳ್ಳಿ ಟಿಎಚ್‍ಒ ಡಾ. ಸಂಜಯ್ ಹೇಳಿದ್ದಾರೆ.