– ಯುಕೆಗೆ ವಿಮಾನಸಂಚಾರ ಆರಂಭ
ನವದೆಹಲಿ: ರೂಪಾಂತರಿ ಕೊರೊನಾದಿಂದಾಗಿ ರದ್ದಾಗಿದ್ದ ಬ್ರಿಟನ್ ವಿಮಾನ ಸಂಚಾರ ಇಂದಿನಿಂದ ಆರಂಭಗೊಳ್ಳಲಿವೆ. ಇಂದು 246 ಪ್ರಯಾಣಿಕರು ಭಾರತಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ ಯುಕೆಯ ವಿಮಾನಯಾನವನ್ನ ತಡೆ ಹಿಡಿಯಲಾಗಿತ್ತು. ನಂತರ ಈ ಆದೇಶವನ್ನ ಜನವರಿ 8ರವರೆಗೆ ವಿಸ್ತರಿಸಲಾಗಿತ್ತು.
ಭಾರತದಿಂದ ಯುಕೆಗೆ ವಿಮಾನ ಸಂಚಾರ ಬುಧವಾರದಿಂದಲೇ ಆರಂಭಗೊಂಡಿದೆ. ಇದುವರೆಗೂ ಭಾರತದಲ್ಲಿ 73 ಜನರಿಗೆ ಬ್ರಿಟನ್ ವೈರಸ್ ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Advertisement
ಈ ವಾರ ಬ್ರಿಟನ್ ಮತ್ತು ಭಾರತದ ನಡುವೆ 30 ವಿಮಾನಗಳು ಹಾರಾಟ ನಡೆಸಲಿವೆ. ಇವುಗಳಲ್ಲಿ 15 ಭಾರತ ಮತ್ತು 15 ಬ್ರಿಟನ್ ವಿಮಾನಗಳಿವೆ. ಇದೇ ರೀತಿ ಜನವರಿ 23ರವರೆಗೆ ವಾರಕ್ಕೆ ಕೇವಲ 30 ವಿಮಾನಗಳು ಹಾರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಳ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತು ಚರ್ಚೆ ನಡೆಸಿ ಹೇಳಲಾಗುತ್ತದೆ. ಬ್ರಿಟನ್ ನಿಂದ ದಹೆಲಿಗೆ ಬಂದಿಳಿಯುವ ಪ್ರಯಾಣಿಕರು ತಮ್ಮ ನಗರಗಳ ಫ್ಲೈಟ್ ಹತ್ತುವ ಮಧ್ಯೆ 10 ಗಂಟೆ ಅಂತರವಿರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
Advertisement
Advertisement
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಯುಕೆಯಿಂದ ಬರೋ ವಿಮಾನಗಳ ತಡೆಯಾಜ್ಞೆ ಆದೇಶವನ್ನ ಜನವರಿ 31ರವರೆಗೆ ವಿಸ್ತರಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಯುಕೆಯ ಹೊಸ ರೂಪಾಂತರಿ ಕೊರೊನಾ ಅಪಾಯಕಾರಿಯಾಗಿದ್ದು, ದೇಶದಲ್ಲಿ ಅದು ನಿಯಂತ್ರಣಕ್ಕೆ ಸಿಗುವರೆಗೂ ವಿಮಾನ ಸಂಚಾರ ನಿರ್ಬಂಧಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.