ಹೊಸ ಉದ್ಯಮ ಆರಂಭಿಸಿ ರೈತರಿಗೆ ನೆರವಾದ ದರ್ಶನ್ ಪತ್ನಿ

Public TV
1 Min Read
VIJAYALAKSHMI

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೊಸ ಉದ್ಯಮಕ್ಕೆ ಮುಂದಾಗಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ವಿಜಯಲಕ್ಷ್ಮೀ, ರೈತರಿಗೆ ನೆರವಾಗಲು ಮುಂದಾಗಿದ್ದು, ಡಿಜಿಟಲ್ ಮಾಧ್ಯಮದ ಮೂಲಕ ಹಣ್ಣು-ತರಕಾರಿಗಳನ್ನು ಆನ್‍ಲೈನ್ ಮೂಲಕ ಗ್ರಾಹಕರಿಗೆ ತಲುಪಿಸಲು ಮುಂದಾಗಿದ್ದಾರೆ.

darshan vijayalakshmi

ಕೊರೊನಾ ಹಿನ್ನೆಲೆ ಒಂದೆಡೆ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಕೊಳ್ಳುವವರಿಲ್ಲದೆ ಕೊಳೆಯುತ್ತಿವೆ ಎಂದು ಗೋಳಿಡುತ್ತಿದ್ದಾರೆ. ಅದೇ ರೀತಿ ಜನರು ಮನೆಯಿಂದ ಹೊರಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದು, ಅಂಗಡಿಗಳಿಗೆ ಹೋಗುವುದು ವಿರಳವಾಗಿದೆ. ಹೀಗಾಗಿ ಇಬ್ಬರಿಗೂ ನೆರವಾಗುವಂತೆ ವಿಜಯಲಕ್ಷ್ಮಿ ಅವರು ಡಿಜಿಟಲ್ ಮಾರುಕಟ್ಟೆ ತೆರೆಯುತ್ತಿದ್ದಾರೆ.

ಸುತ್ತಮುತ್ತಲಿನ ರೈತರು ಬೆಳೆದಿರುವ ಫ್ರೆಶ್ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ- ರೈತರಿಗೆ ನೆರವಾಗಲು ಮುಂದಾಗಿದ್ದಾರೆ. ಮೈ ಫ್ರೆಶ್ ಬಾಸ್ಕೆಟ್ ಎಂಬ ಆ್ಯಪ್ ಲಾಂಚ್ ಮಾಡಿದ್ದು, ಪ್ರಯೋಗಾತ್ಮಕವಾಗಿ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳಿಗೆ ವಿಸ್ತರಿಸುವ ಕುರಿತು ಚಿಂತನೆಯನ್ನು ವಿಜಯಲಕ್ಷ್ಮಿ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಈ ಆ್ಯಪ್ ಇಂದಿನಿಂದ ಕಾರ್ಯನಿರ್ವಹಿಸಲಿದೆ.

VIJAYALAKSHMI 10

ಹಣ್ಣು, ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಬುಕ್ ಮಾಡಬಹುದಾಗಿದ್ದು, ಶೀಘ್ರವೇ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *