ಬೆಂಗಳೂರು: ನಿಜವಾದ ಸಂತೋಷ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಕಾಂಗ್ರೆಸ್ ಮಾಜಿ ಸಂಸದೆ, ನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಸಕ್ರಿಯವಾಗಿರುವರಮ್ಯಾ ಅವರು ರಾಮ ಮಂದಿರ ವಿಚಾರವಾಗಿ ಮೊದಲ ಬಾರಿಗೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Advertisement
https://www.facebook.com/ramyaactressofficial/posts/10158218252710196
Advertisement
ಹಿಂದೂಗಳು ಸಂತೋಷದಿಂದ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾಗುತ್ತಿರುವುದನ್ನು ಕಂಡು ನನಗೆ ಸಂತಸವಿದೆ. ಮುಸ್ಲಿಮರು ಸಂತೋಷದಿಂದ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದನ್ನು ನೋಡಿ ನನಗೆ ಸಂತಸವಿದೆ. ಆದರೆ ಇಬ್ಬರೂ ಸಂತೋಷವಾಗಿರಲು ಅಥವಾ ದೇವರನ್ನು ಅರಿತುಕೊಳ್ಳಲು ದೇವಾಲಯ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಅವರಿಗೆ ತಿಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ. ನಿಜವಾದ ಸಂತೋಷ ಏಕತೆ/ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ರಾಜಕೀಯಕ್ಕೆ ಬಲಿಯಾಗಬೇಡಿ. ರಾಜಕೀಯ ಶಕ್ತಿ ಮತ್ತು ನಿಯಂತ್ರಣಕ್ಕಾಗಿ ಸೃಷ್ಟಿಸುವ ಬಿಕ್ಕಟ್ಟಿಗೆ ಬಲಿಯಾಗಬೇಡಿ. ಪ್ರಶ್ನಿಸುವ ಮೂಲಕ ಉತ್ತುಂಗಕ್ಕೆ ಏರಿ ಎಂದು ಹೇಳಿದ್ದಾರೆ.
ಬುಧವಾರ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿದ್ದರು. ಗರ್ಭಗುಡಿ ನಿರ್ಮಾಣವಾಗುವ ಜಾಗದಲ್ಲಿ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ಭೂಮಿ ಪೂಜೆ ಕಾಯಕ್ರಮ ನಡೆದಿತ್ತು.