ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

Public TV
2 Min Read
bb chakravarthy priyanka

ಳೆದ ಕೆಲ ದಿನಗಳಿಂದ ಪ್ರಿಯಾಂಕಾ ಹಾಗೂ ಶಮಂತ್ ಜೋಡಿ ಕುರಿತು ಸಖತ್ ಚರ್ಚೆಯಾಗುತ್ತಿದ್ದು, ಚಕ್ರವರ್ತಿ ಇವರಿಬ್ಬರನ್ನು ಸೇರಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಮಾತ್ರ ನಾಚುತ್ತಲೇ ತಿರಸ್ಕರಿಸುತ್ತಿದ್ದಾರೆ. ಇಬ್ಬರೂ ಪರೋಕ್ಷವಾಗಿ ಮಾತನಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಮಧ್ಯೆ ಕನ್ವಿನ್ಸ್ ಮಾಡಲು ಬಂದ ಚಕ್ರವರ್ತಿ ಅವರಿಗೆ ನಗುತ್ತಲೇ ತಕ್ಕ ಉತ್ತರ ನೀಡಿದ್ದಾರೆ.

bb chakravrthy priyanka 2

ನಿನ್ನೆ ನಾನು ಹೇಳಿದ್ದಕ್ಕೆ ಶಮಂತ್ ತುಂಬಾ ಡಿಸ್ಟರ್ಬ್ ಆಗಿಬಿಟ್ಟಿದ್ದಾನೆ, ಹಾಗೆ ಹೇಳಬೇಡಿ ಸರ್ ಎಂದು ಜಗಳ ಮಾಡಿದ. ನನಗೆ ಇಂಟರೆಸ್ಟ್ ಇಲ್ಲ, ಹೋಗಿ ನೇರವಾಗಿ ಹೇಳುತ್ತೇನೆ ಅವರಿಗೆ ಎಂದು ರೇಗಾಡಿದ ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳಿದ್ದಾರೆ. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಪ್ರಿಯಾಂಕಾ, ನೀವು ನಿನ್ನೆ ತುಂಬಾ ಅತಿಯಾಗಿ ಮಾತನಾಡಿದಿರಿ ಎಂದು ಹೇಳಿದ್ದಾರೆ. ಇದಕ್ಕೆ ಚಕ್ರವರ್ತಿ ಉತ್ತರಿಸಿ ನನಗೇನು ಗೊತ್ತು, ನೀನು ಲವ್ ಸಿಂಬಲ್ ಮಾಡಿದ್ದಕ್ಕೆ ಆ ರೀತಿ ಅಫೆಕ್ಷನ್ ಇರಬಹುದು ಎಂದುಕೊಂಡೆ ಎಂದಿದ್ದಾರೆ. ತಕ್ಷಣವೇ ಉತ್ತರಿಸಿದ ಪ್ರಿಯಾಂಕಾ, ನನಗೆ ಹೊರಗಡೆ ತುಂಬಾ ಜನ ಬೇಕಾದವರಿದ್ದಾರೆ, ಈ ಮನೆಗೆ ಅದಕ್ಕೋಸ್ಕರ ಬಂದಿಲ್ಲ. ಆ ರೀತಿ ಯೋಚನೆಗಳೂ ಬರಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.

bigg boss chakravrthy shamanth priyanka 4

ಇದಕ್ಕಾಗಿಯೇ ಬರಲ್ಲ, ಆ ರೀತಿ ಸಂಭವಿಸಬಹುದು ಎಂದು ಚಕ್ರವರ್ತಿ ಸಮರ್ಥಿಸಿಕೊಳ್ಳಲು ಹೋಗಿದ್ದಾರೆ. ನಿಮಗೆ ನೀವೇ ಹೇಗೆ ಯೋಚನೆ ಮಾಡುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಹಾಗೆ ಅನ್ನಿಸಿದ್ದಕ್ಕೆ ಬಂದು ನಿನ್ನನ್ನು ಕೇಳಿದೆ, ಹಾಗೆ ಅನ್ನಿಸಿಲ್ಲ ಎಂದು ಗೊತ್ತಾದ ಮೇಲೆ ಬಿಟ್ಟಾಕಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ಅಷ್ಟು ಬುದ್ಧಿವಂತರಾಗಿ ಹೀಗೆ ಮಾಡಿದರೆ ಹೇಗೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಬಗ್ಗೆ ಶಮಂತ್ ಸಹ ಬೇಡ ಸರ್ ನಂಗೆ ಇಂಟರೆಸ್ಟ್ ಇಲ್ಲ ಅಂದ, ಸರಿ ಫ್ರೆಂಡ್ ಆಗಿರಿ ಎಂದು ಹೇಳಿದೆ ಎಂದು ಚಕ್ರವರ್ತಿ ಹೇಳುತ್ತಾರೆ.

bb priyanka 2

ಹಾಗಾದರೆ ನಮಗೆ ಇಂಟರೆಸ್ಟ್ ಇದೆ ಅಂತಾನಾ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಆಗ ನನಗೆ ಮೂರ್ನಾಲ್ಕು ದಿನದಿಂದ ಹಾಗೆ ಅನ್ನಿಸುತ್ತಿತ್ತು, ನಿಮ್ಮಿಬ್ಬರ ನಡುವೆ ಅಫೆಕ್ಷನ್ ಇದೆ ಎಂದು ಭಾಸವಾಗಿತ್ತು ಎಂದು ಚಕ್ರವರ್ತಿ ಹೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸ್‍ನಲ್ಲಿ ಅಥವಾ ಎಲ್ಲಿ ಪರಿಚಯವಾಗಿದ್ದಿಯಾ ಗೊತ್ತಿಲ್ಲ, ಒಟ್ನಲ್ಲಿ ನೀನು ಚೆನ್ನಾಗಿರಬೇಕು ಅಷ್ಟೇ. ಇದಕ್ಕಾಗಿ ನಮ್ಮ ಕೈಲಾಗಿದ್ದನ್ನು ನಾವು ಮಾಡುತ್ತೇವೆ, ನಮಗೆ ದೇವರು ಶಕ್ತಿ, ಅಸ್ಥಿತ್ವ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಅದನ್ನು ಇಂತಹ ಕೆಲಸಗಳಿಗೆ ಉಪಯೋಗಿಸಬೇಡಿ, ಬೇರೆ ಕೆಲಸಗಳಿವೆ ಅವುಗಳನ್ನು ಮಾಡಿ, ನಾವು ಯಾರನ್ನು ಮದುವೆ ಆಗಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಕ್ಕ ಉತ್ತರ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *