ದಾವಣಗೆರೆ: ಬಹು ದಿನಗಳಿಂದ ಇದ್ದ ಹೊಟ್ಟೆನೋವು ತಾಳಲಾರದೆ 11 ತಿಂಗಳ ಮಗುವಿಗೆ ನೇಣು ಬಿಗಿದು, ತಾನು ನೇಣಿಗೆ ಶರಣಾದ ಮನಕಲುಕುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಶ್ವೇತಾ (26) ಮತ್ತು 11 ತಿಂಗಳ ಜಾಹ್ನವಿ ಮೃತ ದುರ್ದೈವಿಗಳಾಗಿದ್ದು, ಇಂದು ಬೆಳಗ್ಗೆ ಮನೆ ಮುಂದೆ ಚರಂಡಿ ಕಾಮಗಾರಿಗಾಗಿ ಜೆಸಿಬಿ ಬಂದಿದ್ದರಿಂದ ಶ್ವೇತಾಳ ತಂದೆ ತಿಮ್ಮಪ್ಪ ಕೆಲಸಗಾರರಿಂದ ಜೆಸಿಬಿಯ ಕೆಲಸ ಮಾಡಿಸುತ್ತಿದ್ದರು. ಮನೆಯಲ್ಲಿ ಶ್ವೇತಾ ಮತ್ತು ಜಾಹ್ನವಿ ಮಾತ್ರ ಇದ್ದರು. ಅಲ್ಲದೆ ಉಳಿದವರು ತೋಟದಲ್ಲಿ ಪೂಜೆ ನಡೆಯುತ್ತಿದ್ದರಿಂದ ಎಲ್ಲರು ೂ ಅಲ್ಲಿಗೆ ಹೋಗಿದ್ದರು.
ಮನೆಯಲ್ಲಿ ಶ್ವೇತಾ ಹಾಗೂ 11 ತಿಂಗಳ ಮಗು ಮಾತ್ರ ಇದ್ದು, ಬಹು ದಿನಗಳಿಂದ ತಾಳಲಾರದ ಹೊಟ್ಟೆ ನೋವು ಇದ್ದುದರಿಂದ ಸಾಕಷ್ಟು ಬಾರಿ ಆಸ್ಪತ್ರೆಗೆ ತೋರಿಸಲಾಗಿತ್ತು. ಆದರೂ ಗುಣಮುಖರಾಗಿರಲಿಲ್ಲ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ಶ್ವೇತಾ ತನ್ನ ಮಗುವಿಗೆ ನೇಣು ಬಿಗಿದು, ತಾನೂ ನೇಣು ಬಿಗಿದುಕೊಂಡು ಸಾವನ್ನಪ್ಪಿದಾಳೆ ಎಂದು ಪೊಲೀಸ್ ಠಾಣೆಯ ದೂರಿನಲ್ಲಿ ದಾಖಲಾಗಿದೆ. ಶ್ವೇತಾಳ ತಂದೆ ತಿಮ್ಮಪ್ಪ ನೀರು ಕುಡಿಯಲೆಂದು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಅಟ್ಟದ ಮೇಲೆ ತೊಲೆಗೆ ಮಗುವನ್ನು ನೇಣು ಹಾಕಿ, ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಪಿಎಸ್‍ಐ ಶಿವರುದ್ರಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.