ಮೈಸೂರು: ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದಿದ್ದ ಯುವಕ ಸಾವನ್ನಪ್ಪಿದ್ದಕ್ಕೆ ಹುಣಸೂರಿನಲ್ಲಿ ಆಸ್ಪತ್ರೆ ವಿರುದ್ದವೇ ಪೋಷಕರು ದೂರು ನೀಡಿದ್ದಾರೆ.
ರಾಹುಲ್ ಜೈನ್ ಮೃತ ಯುವಕ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಹುಲ್ ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಡ್ರಿಪ್ಸ್ ಹಾಕಿ ಇಂಜೆಕ್ಷನ್ ನೀಡಿದ್ದರು.
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ರಾಹುಲ್ ಮನೆಗೆ ಬಂದು ಮಲಗಿದ್ದರು. ಆದರೆ ಮಲಗಿದ ರಾಹುಲ್ ಸಾವನ್ನಪ್ಪಿದ್ದು, ಈ ಸಾವಿಗೆ ಆಸ್ಪತ್ರೆ ವೈದ್ಯರೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ ಪೋಷಕರು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.