ತುಮಕೂರು: ರೌಡಿಶೀಟರ್ ಒಬ್ಬನನ್ನು ಮತ್ತೊಂದು ರೌಡಿ ಗುಂಪು ಕೊಲೆಗೈದು ಪರಾರಿಯಾದ ಘಟನೆ ತುಮಕೂರು ನಗರದ ಎಸ್‍ಐಟಿ ಬಡವಾವಣೆಯ ಮಂಜುಶ್ರೀ ಬಾರ್ ಎದುರು ನಡೆದಿದೆ.
ಮಂಜು ಅಲಿಯಾಸ್ ಆರ್ ಎಕ್ಸ್ ಮಂಜ (31) ಕೊಲೆಯಾದ ರೌಡಿಶೀಟರ್. ರಾತ್ರಿ ಸ್ನೇಹಿತರ ಜೊತೆ ಮಾತನಾಡಿ ಮನೆಗೆ ಹೋಗುವಾಗ 9.45ರ ಸುಮಾರಿನಲ್ಲಿ ಕೃತ್ಯ ನಡೆದಿದೆ.
ನಾಲ್ಕೈದು ರೌಡಿಗಳು ಬಂದು ಮಂಜು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಹತ್ಯೆ ಮಾಡಿದ ನಂತರ ರೌಡಿ ಗುಂಪು ಸ್ಥಳದಿಂದ ಪರಾರಿಯಾಗಿದೆ. ಹೀಗಾಗಿ ಕೊಲೆ ಮಾಡಿರುವ ರೌಡಿಗಳು ಯಾರೆಂದು ತಿಳಿದುಬಂದಿಲ್ಲ.
ಸ್ಥಳಕ್ಕೆ ಎನ್ ಇಪಿಎಸ್ ಪೊಲೀಸರು ದೌಡಾಯಿಸಿದ್ದು, ಎನ್‍ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.