ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.
ಜೂನಿಯರ್ ಹೈಸ್ಕೂಲ್‌ನಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಪಠ್ಯದ ಬಗ್ಗೆ ವಿದ್ಯಾರ್ಥಿಗಳ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸಿದರು. ಈ ವೇಳೆ ಕೆಲಕಾಲ ಶಿಕ್ಷಕರಾಗಿ ಪಾಠ ಮಾಡಿದರು.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆಗೆ ಶಿಕ್ಷಕರಿಗೂ ಜಾಗೃತಿ ಜೊತೆಗೆ ಸಭೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಇಂದಿನಿಂದ 6,7,8 ಶಾಲೆಗಳು ಆರಂಭವಾಗಿದೆ. ಬೆಂಗಳೂರು ನಗರದಲ್ಲಿ 8ನೇ ತರಗತಿ ಮಾತ್ರ ಆರಂಭವಾಗಿದೆ. ಯಾವ ರೀತಿ ನಡೆಯುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಶಾಲೆಯ ಭೇಟಿ ನೀಡಿದ್ದೇನೆ. ಶಾಲೆಯಲ್ಲಿ ಉತ್ತಮ ಹಾಜರಾತಿ ಇದೆ. ಕೆಲ ಪಠ್ಯಕ್ರಮ ಕಡಿಮೆಗೊಳಿಸಲಾಗಿದೆ. 6 ರಿಂದ 10ನೇ ತರಗತಿ ಶಾಲೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದರು.
ಖಾಸಗಿ ಶಾಲೆಗಳ ಸಂಘ ಪ್ರತಿಭಟನೆ ಬಗ್ಗೆ ಮಾತನಾಡಿ, ಅವರದ್ದು ನಾಲ್ಕೈದು ಬೇಡಿಕೆ ಇದೆ, ಪೋಷಕರ ಪರಿಸ್ಥಿತಿ ಅರಿತು ಶೇ.30 ಶುಲ್ಕ ಕಡಿತ ಮಾಡಲಾಗಿತ್ತು, ಇದ್ದಕ್ಕೆ ಒಪ್ಪಿಗೆ ನೀಡದೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಸರ್ಕಾರ ಇದಕ್ಕೆ ಮಧ್ಯ ಪ್ರವೇಶ ಮಾಡಲು ಇಷ್ಟ ಇಲ್ಲ. ಪೋಷಕರು ಮತ್ತು ಶಾಲೆ ಸಮನ್ವಯತೆ ಸಾಧಿಸಬೇಕು. ಪೋಷಕರು ಮತ್ತು ಶಾಲೆ ಸಂಧಾನಕ್ಕೆ ಬರಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ನೀಡಬೇಕು ಮತ್ತು ಶಾಲೆಗಳೆಲ್ಲಾ ನಿಯಮ ಪಾಲಿಸಬೇಕು. ಅಗ್ನಿ ನಂದಕ, ಕಟ್ಟಡ ನಿರ್ಮಾಣದಲ್ಲಿ, ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಆರೋಗ್ಯದ ಗಮನಹರಿಸಬೇಕು ಎಂದರು.