ಗದಗ: ಹೈವೇ ಪೆಟ್ರೋಲ್ ಬಂಕ್ ಬಳಿ ರಾತ್ರಿ ನಿಲ್ಲಿಸಿದ ವಾಹನಗಳ ಮೇಲೆ ದರೋಡೆಕೋರರು ದಾಳಿಮಾಡುತ್ತಿರುವ ಘಟನೆ ಜಿಲ್ಲೆಯ ಮುಂಡರಗಿ ಹೊರವಲಯದಲ್ಲಿ ನಡೆದಿದೆ.
Advertisement
ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯ ಮುಂಡರಗಿ ಹೊರವಲಯದ ವಿರೇಶ್ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕ್ ಬಳಿ ದರೋಡೆ ಪ್ರಕರಣ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡರಾತ್ರಿ ನಿದ್ರೆ ಬರುತ್ತಿದ್ದಂತೆ ಬಂಕ್ ಹಾಗೂ ಡಾಬಾ ಬಳಿ ವಾಹನಗಳನ್ನು ನಿಲ್ಲಿಸಿ ರೆಸ್ಟ್ ಮಡುವ ವೇಳೆ ದಾಳಿ ಮಾಡುತ್ತಿರೆ.
Advertisement
ಜರ್ಕಿನ್ ಹಾಕಿಕೊಂಡು ಮುಖಕ್ಕೆ ಮಂಕಿ ಕ್ಯಾಪ್, ಅಥವಾ ಕರವಸ್ತ್ರ ಕಟ್ಟಿಕೊಂಡು ಬಂದು, ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬಾಯಿ ಬಿಡದಂತೆ ಬೆದರಿಕೆ ಹಾಕುತ್ತಾರೆ. ಚಾಲಕ ಹಾಗೂ ಕ್ಲೀನರ್ ಬಳಿ ಇರುವ ಹಣ ಹಾಗೂ ಆಭರಣಗಳು ದೋಚುತ್ತಿರುವ ಕೃತ್ಯ ಅನೇಕ ದಿನಗಳಿಂದ ನಡೆಯುತ್ತಿದೆ.
Advertisement
Advertisement
ನಾಲ್ಕು ಜನ ದರೋಡೆಕೋರರ ಅಟ್ಟಹಾಸ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೇ ತಿಂಗಳಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ನಡೆದಿವೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡುವ ದರೋಡೆಕೋರರ ದರ್ಪಕ್ಕೆ ಅನೇಕ ವಾಹನ ಚಾಲಕ ಹಾಗೂ ಕ್ಲೀನರ್ ಗಳು, ಬಂಕ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ, ಸಂಬಂಧಿಸಿದ ಪೊಲೀಸರ ಗಮನಕ್ಕೆ ತಂದರೂ, ಡೋಂಟ್ ಕೇರ್ ಅಂತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಸದ್ಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನು ಮುಂದಾದರೂ ರೋಡ್ ರಾಬರಿಗಳು ನಡೆಯುವುದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಮುಂದಾಗುತ್ತಾರಾ ಕಾದು ನೋಡಬೇಕಿದೆ. ಇದನ್ನೂ ಓದಿ:ಹತ್ತಿರದಲ್ಲೇ ನಗರವಿದ್ದರೂ ಕೊರೊನಾ ನಿಯಂತ್ರಣ – ದೇಶದ ಗಮನ ಸೆಳೆದ ಮುನಿರಾಬಾದ್ ಗ್ರಾಮ