ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಕೊರೊನಾದ ಅಬ್ಬರ ಯಥೇಚ್ಛವಾಗಿದ್ದು, 24 ಗಂಟೆಯಲ್ಲಿ ಐವರು ಕೊರೊನಾಗೆ ಬಲಿಯಾಗಿದ್ದಾರೆ. 26 ವರ್ಷದ ಯುವಕ ಕೂಡ ಹೆಮ್ಮಾರಿಗೆ ಬಲಿಯಾಗಿದ್ದಾನೆ. ಇಡೀ ರಾಜ್ಯದಲ್ಲೇ ಬೆಂಗಳೂರಿನಲ್ಲಿ ಅತೀ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಿಲಿಕಾನ್ ಸಿಟಿ ಮಂದಿಯ ಆತಂಕ ಹೆಚ್ಚಿಸಿದೆ.
ರಾಜ್ಯದಲ್ಲಿ ಬೆಂಗಳೂರಲ್ಲೇ ಅತೀ ಹೆಚ್ಚು ಹೈರಿಸ್ಕ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮೂಲಕ ಹೈರಿಸ್ಕ್ ಕೇಸ್ ಕೊರೊನಾ ರೋಗಿಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಈ ಪ್ರಕರಣಗಳಲ್ಲಿ ಉಸಿರಾಟ ತೊಂದರೆಯಲ್ಲಿರುವವರೇ ಹೆಚ್ಚಾಗಿದ್ದು, 60 ವರ್ಷ ಮೇಲ್ಪಟ್ಟವರು ಇದ್ದಾರೆ.
ಬೆಂಗಳೂರಲ್ಲಿ ಒಟ್ಟು 53 ಹೈರಿಸ್ಕ್ ಪ್ರಕರಣಗಳಿವೆ. ಇದರಲ್ಲಿ 7 ಮಂದಿ 60 ವರ್ಷ ಮೇಲ್ಪಟ್ಟ ಉಸಿರಾಟ ತೊಂದರೆ ಇರುವ ಕೊರೊನಾ ರೋಗಿಗಳಾಗಿದ್ದಾರೆ. 35 ಮಂದಿ ಜ್ವರ ಲಕ್ಷಣ, ಉಸಿರಾಟ ತೊಂದರೆ ಇರುವವರು, 9 ಮಂದಿ 60 ವರ್ಷ ಮೇಲ್ಪಟ್ಟ ಕೊರೊನಾ ರೋಗಿಗಳಾಗಿದ್ದಾರೆ. ಒಟ್ಟಿನಲ್ಲಿ ಶೇ. 19.8ರಷ್ಟು ಹೈರಿಸ್ಕ್ ರೋಗಿಗಳಿದ್ದು, ಇದೂವರೆಗೆ 27 ಮಂದಿ ಬೆಂಗಳೂರಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.