ಬೆಂಗಳೂರು: ರಾಜ್ಯದಲ್ಲಿ ಜಿಲ್ಲೆಗಳ ನಡುವೆ ಆಕ್ಸಿಜನ್ ಹಂಚಿಕೆ ವಿಚಾರವಾಗಿ ಮಾರ್ಗಸೂಚಿಗಳನ್ನು ಜಾರಿ ತರಲಾಗುವುದು. ಈ ಮೂಲಕ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡು ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
Advertisement
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ, ಎಲ್ಲಾ ಆಸ್ಪತ್ರೆಗಳಿಗೂ ಆಕ್ಸಿಜನ್ ಸಹಾಯವಾಣಿ ತಲುಪಿಸಿ. ಆಕ್ಸಿಜನ್ ಎಲ್ಲಿ ಸಿಗುತ್ತದೆ ಎಲ್ಲಿಗೆ ಬೇಡಿಕೆಯಿದೆ ಎಂದು ತಿಳಿದುಕೊಳ್ಳಿ. ಆಕ್ಸಿಜನ್ ಪೂರೈಕೆ, ಬೇಡಿಕೆಯ ಅಂಕಿ ಅಂಶ ಸಂಗ್ರಹಿಸಿ. ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ರೂಪಿಸಿ ಮತ್ತು ನೈಜ ಕಾಲದ ಮಾಹಿತಿ ವ್ಯವಸ್ಥೆ ರೂಪಿಸಿ ಎಂದು ಸೂಚನೆ ನೀಡಿತ್ತು. ಈ ಸೂಚನೆಗಳಿಗೆ ಉತ್ತರಿಸಿದ ರಾಜ್ಯ ಸರ್ಕಾರ, ರಾಜ್ಯದಲ್ಲಿ ಆಕ್ಸಿಜನ್ ಸಹಾಯವಾಣಿ ಜಾರಿಗೊಳಿಸಲಾಗುವುದು ಎಂದು ಉತ್ತರಿಸಿದೆ.
Advertisement
Advertisement
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 100 ಮೆ.ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ಬಳ್ಳಾರಿಯಿಂದ 60 ಮೆ.ಟನ್ ಹಂಚಿಕೆ ಮಾಡಲಾಗಿದೆ. ಉಳಿದ 40 ಮೆ.ಟನ್ ಒರಿಸ್ಸಾದ ಕಳಿಂಗದಿಂದ ಪೂರೈಕೆಯಾಗಿದೆ. ಐಒಸಿಯ 20 ಮೆ.ಟನ್, ಬಹ್ರೇನ್‍ನ 20 ಮೆ.ಟನ್ ಹಂಚಿಕೆಯಾಗಿದೆ. ಇದು ಮಾತ್ರವಲ್ಲದೇ ಕೇಂದ್ರದಿಂದ 28 ಪಿಎಸ್‍ಎ ಆಕ್ಸಿಜನ್ ಘಟಕ ಮಂಜೂರು ಮಾಡಲಾಗಿದ್ದು, ರಾಜ್ಯದಿಂದಲೂ 40 ಪಿಎಸ್‍ಎ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಹೈಕೋರ್ಟ್‍ಗೆ ಎಜಿ ಪ್ರಭುಲಿಂಗ್ ನಾವದಗಿ ಮಾಹಿತಿ ನೀಡಿದ್ದಾರೆ.
Advertisement