ಹೈಕಮಾಂಡ್, ಸಿಎಂ ಯಡಿಯೂರಪ್ಪ ನಡುವೆ ಎರಡು ವರ್ಷದ ಒಪ್ಪಂದವಾಗಿತ್ತು: ಸಂಸದ ಶ್ರೀನಿವಾಸ್ ಪ್ರಸಾದ್

Public TV
2 Min Read
Srinivas Prasad

– ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲ
– ವಿಶ್ವನಾಥ್, ನಾನು ಬಿಜೆಪಿಯನ್ನ ಕಟ್ಟಿದವರಲ್ಲ

ಚಾಮರಾಜನಗರ: ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರದ ಕುರಿತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವೆ ಎರಡು ವರ್ಷಗಳ ಅಗ್ರಿಮೆಂಟ್ ಆಗಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಒಪ್ಪಂದ ಆಗಿತ್ತು. ನಿಮಗೆ ವಯಸ್ಸಾಗಿದ್ದರೂ ಅವಕಾಶ ಕೊಡುತ್ತೇವೆ. ಎರಡು ವರ್ಷ ಸಿಎಂ ಆಗಿ ಅಂತಾ ಹೈ ಕಮಾಂಡ್ ಹೇಳಿತ್ತು. ಸಿಎಂ ಬಿಎಸ್‍ವೈ ಹಾಗೂ ಹೈಕಮಾಂಡ್ ನಡುವೆ ನಡೆದಿದ್ದ ಮಾತುಕತೆ ಪ್ರಕಾರ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

BSY 6

ಪಕ್ಷದ ಮುಖ್ಯ ಹುದ್ದೆಯಲ್ಲಿ 75 ವರ್ಷ ಮೇಲ್ಪಟ್ಟವರು ಇರಬಾರದೆಂದು ಪಕ್ಷದ ನಿಲುವಾಗಿದೆ. ವಿಶೇಷ ಸಂದರ್ಭದಲ್ಲಿ ಯಡಿಯೂರಪ್ಪ ಸಿಎಂ ಆದರು. ಇದೂವರೆಗಿದ್ದ ಉಹಾಪೋಹಕ್ಕೆ ತೆರೆಬಿದ್ದಿದೆ. ಯಡಿಯೂರಪ್ಪ ಮತ್ತು ಹೈಕಮಾಂಡ್ ನಡುವೆ ಆಗಿದ್ದ ಮಾತುಕತೆಯಂತೆ ಸಿಎಂ ನಡೆದುಕೊಂಡಿದ್ದಾರೆ. ಈಗ ಒಂದು ಹಂತಕ್ಕೆ ಬಂದಿದೆ ಅಂತಾ ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

bsy cover 2

ಇದೇ ವೇಳೆ ಮುಂಬೈ ಫ್ರೆಂಡ್ಸ್ ಗೆ ಮಂತ್ರಿ ಸ್ಥಾನ ಕೊಡಬಾರದೆಂಬ ಎಂಎಲ್‍ಸಿ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವನಾಥ್ ಹೇಳಿಕೆಗೆ ಚಿಕ್ಕಾಸಿನ ಬೆಲೆ ಇಲ್ಲ. ವಿಶ್ವನಾಥ್ ಹತಾಶವಾದ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವನಾಥ್ ಏನ್ ಬಿಜೆಪಿ ಹೈಕಮಾಂಡಾ? ನಮ್ಮ ತೇವಲಿಗೆ ಈ ರೀತಿಯ ಹೇಳಿಕೆ ಕೊಡಬಾರದು. ನಾನು, ವಿಶ್ವನಾಥ್ ಬಿಜೆಪಿ ಪಕ್ಷ ಕಟ್ಟಿದ್ದವರಲ್ಲ. ಬದಲಾದ ರಾಜಕಾರಣದಲ್ಲಿ ಬಿಜೆಪಿಗೆ ಬಂದಿದ್ದು ನಮ್ಮ ಕರ್ತವ್ಯವನ್ನ ನಿಷ್ಠೆಯಿಂದ ನಿರ್ವಹಿಸಬೇಕೆ ಹೊರತು ಈ ರೀತಿ ಮಾತನಾಡಬಾರದು ಎಂದು ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: RSS ಬುದ್ಧಿ 0, ಮುಸ್ಲಿಮರ ಮೇಲಿನ ದ್ವೇಷ 100%: ಭಾಗವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ

vishwanath 1 medium

ಬಿಎಸ್‍ವೈ ಮುಂದುವರಿಕೆಗೆ ಸ್ವಾಮೀಜಿಗಳ ಒತ್ತಾಯ ವಿಚಾರವಾಗಿ ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲವೆಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಸಿಡಿಮಿಡಿಗೊಂಡರು. ಪಕ್ಷಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು. ಈ ರೀತಿಯ ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಮುಂದಿನ ಸಿಎಂ ಯಾರೆಂದು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಯಾರು ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷ ಸಂಘಟಿಸಿದ ಯಡಿಯೂರಪ್ಪನವರನ್ನು ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಂಡಿದೆ ಎಂದರು. ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್‍ವೈ

Share This Article
Leave a Comment

Leave a Reply

Your email address will not be published. Required fields are marked *