ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ಕಾವೇರಿಯ ನಿವಾಸದ ಸಮೀಪ ಕೈಕೊಯ್ದುಕೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಶಿವಕುಮಾರ್ ಆರಾಧ್ಯ ಎಂಬ ವ್ಯಕ್ತಿ ಕೈ ಕೊಯ್ದುಕೊಂಡ ಅಭಿಮಾನಿ. ನಮ್ಮ ಸಾಹೇಬರು ಬಿ.ಎಸ್ ಯಡಿಯೂರಪ್ಪ ರ ಮಗನನ್ನು ಸಂಪುಟಕ್ಕೆ ಸೇರಿಸಿಲ್ಲ. ನನಗೆ ತುಂಬಾ ನೋವಾಗುತ್ತಿದೆ. ನಾನು ಪ್ರಾಣ ಕಳೆದುಕೊಳ್ಳಬೇಕು ಎನ್ನಿಸುತ್ತಿದೆ. ಆದರೆ ನನಗೂ ಕುಟುಂಬ ಇದೆ. ಹಾಗಾಗಿ ಸಾಯುವುದಿಲ್ಲ ಎಂದಿದ್ದಾರೆ.
ವಿಜಯೇಂದ್ರ ಇಲ್ಲದೇ ಇದ್ದರೆ ಅದು ಸಂಪುಟವೇ ಅಲ್ಲ. ಹೈ ಕಮಾಂಡ್ ನನ್ನ ಈ ರಕ್ತ ತೆಗೆದುಕೊಳ್ಳಿ. ಹೈಕಮಾಂಡ್ ನಂಬಿಕೊಂಡರೆ ರಾಜ್ಯದಲ್ಲಿ ಪಕ್ಷ ಕಟ್ಟೊಕೇ ಹಾಗಲ್ಲ. ವಿಜಯೇಂದ್ರ ಅಣ್ಣ ಇಲ್ಲದ ಮೇಲೆ ಅದು ಸಚಿವ ಸಂಪುಟವೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಶಿವಕುಮಾರ್ ಆರಾಧ್ಯನನ್ನ ಸ್ಥಳದಲ್ಲಿದ್ದ ಪೊಲೀಸರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಇದನ್ನೂ ಓದಿ: ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್