– ಮಾರ್ಚ್ ನಲ್ಲಿ ಸಿಎಂ ಬದಲಾಗ್ತಾರಾ?
ಬೆಂಗಳೂರು: ಹೈಕಮಾಂಡ್ ಮುಂದೆ ಸಿಎಂಗೆ ಭಾರೀ ಮುಖಭಂಗವಾಗಿದ್ದು, ಯಡಿಯೂರಪ್ಪ ಕೊಟ್ಟ ಪಟ್ಟಿಯಲ್ಲಿ ಮೂವರಿಗೆ ಮಾತ್ರ ಸ್ಥಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ನಾಲ್ವರ ಹೆಸರನ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿದ ಪಟ್ಟಿಯಿಂದ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
Advertisement
ಸಿಎಂ ತಮ್ಮ ಪಟ್ಟಿಯಲ್ಲಿ ಶಾಸಕರಾದ ಮುನಿರತ್ನ ಮತ್ತು ರೇಣುಕಾಚಾರ್ಯರ ಹೆಸರನ್ನ ಶಿಫಾರಸ್ಸು ಮಾಡಿದ್ದರು. ಆದ್ರೆ ಸಿಎಂ ನೀಡಿದ ಏಳು ಹೆಸರಲ್ಲಿ ಕೇವಲ ಮೂವರನ್ನ ಮಾತ್ರ ಹೈಕಮಾಂಡ್ ಅಂತಿಮ ಮಾಡಿದೆ. ಹೈಕಮಾಂಡ್ ಮುಂದೆ ಯಡಿಯೂರಪ್ಪ ವೀಕ್ ಆದ್ರಾ ಅನ್ನೋ ಮಾತುಗಳ ಜೊತೆ ಮಾರ್ಚ್ ನಲ್ಲಿ ಸಿಎಂ ಬದಲಾವಣೆ ಆಗುತ್ತೆ ಎಂಬ ವದಂತಿಗಳಿಗೆ ಇಂದಿನ ಬೆಳವಣಿಗೆ ಪುಷ್ಠಿ ನೀಡುತ್ತಿವೆ.
Advertisement
ಅನಂತ್ ಕುಮಾರ್ ಇಲ್ಲದಿರುವಿಕೆ ಎದ್ದು ಕಾಣ್ತಿದೆ – ಸಿಎಂ ವಿರುದ್ಧ ಸತೀಶ್ ರೆಡ್ಡಿ ಕೆಂಡಾಮಂಡಲ https://t.co/63InQU9Pq4#Bengaluru #AnanthKumar #BSYeddyurappa #SathishReddy #Cabinet #KannadaNews @BSYBJP @BJP4Karnataka
— PublicTV (@publictvnews) January 13, 2021
Advertisement
ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
Advertisement