ಹಾಸನ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ವಿದೇಶ ಹಕ್ಕಿಗಳ ಕಲರವ ಜೋರಾಗಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ.
Advertisement
ಜಿಲ್ಲೆಯ ಆಲೂರು ತಾಲೂಕಿನ ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಸಮೀಪ ಹರಡಿಕೊಂಡಿರುವ ಭರತವಳ್ಳಿ, ನಾಗವಾರ, ಶೆಟ್ಟಿಹಳ್ಳಿ ಭಾಗದಲ್ಲಿ ದೂರದ ಮಂಗೋಲಿಯಾ ಟಿಬೆಟ್, ಚೀನಾ ಭಾಗದಿಂದ ವಿಶೇಷ ಬಾತುಕೋಳಿಗಳು ವಲಸೆ ಬಂದಿವೆ. ಸಾವಿರಾರು ಕಿಲೋಮೀಟರ್ ದೂರದಿಂದ ಪರ್ವತ ದಾಟಿ ಆಗಮಿಸಿರೋ ಈ ಬಾತುಗಳನ್ನು ಪಟ್ಟೆ ತಲೆ ಬಾತು ಎಂದು ಕರೆಯಲಾಗುತ್ತೆ. ಇಂಗ್ಲೀಷ್ ನಲ್ಲಿ ಇವುಗಳನ್ನು ಬಾರ್ ಹೆಡೆಡ್ ಗೂಸ್ ಎಂದು ಕರೆಯಲಾಗುತ್ತೆ.
Advertisement
Advertisement
ಹೇಮಾವತಿ ಹಿನ್ನೀರು ಇಳಿದಾಗ ಅಲ್ಲಿ ಬೆಳೆಯುವ ಹುಲ್ಲು ಮತ್ತು ಅದರ ಬೀಜ ಈ ವಿಶೇಷ ಪಕ್ಷಿಗಳಿಗೆ ಪ್ರಿಯವಾದ ಆಹಾರ. ಮನುಷ್ಯರು ಹತ್ತಿರ ಹೋದರೆ ಹೆದರುವ ಈ ಪಕ್ಷಿಗಳನ್ನ ಸುಮಾರು 500 ಮೀಟರ್ ದೂರದಲ್ಲಿ ನಿಂತು ನೋಡಿದರೆ ಮಾತ್ರ ಕಾಣಸಿಗುತ್ತವೆ. ಸಾವಿರಾರು ಕಿಲೋ ಮೀಟರ್ ದೂರದಿಂದ ಬರುವ ಈ ಪಕ್ಷಿಗಳು ಮಂಗೋಲಿಯಾ, ಟಿಬೆಟ್, ಚೀನಾದಲ್ಲಿ ಅತಿ ಹೆಚ್ಚು ಚಳಿಯ ಕಾರಣ ಉತ್ತಮ ಹವಾಗುಣ ಹುಡುಕಿಕೊಂಡು ಇಲ್ಲಿಗೆ ಬರುತ್ತವೆ.
Advertisement
ಈ ಪಟ್ಟೆತಲೆ ಬಾತುಕೋಳಿ ನೋಡಲು ಬಹಳ ಆಕರ್ಷಕವಾಗಿದ್ದು, ನುರಾರು ಸಂಖ್ಯೆಯಲ್ಲಿ ಹೇಮಾವತಿ ಹಿನ್ನೀರಿನ ಭಾಗಕ್ಕೆ ಬಂದಿವೆ. ಆದರೆ ಈ ಸುಂದರ ಪಕ್ಷಿಗಳನ್ನ ಇಲ್ಲಿ ಮಾಂಸಕ್ಕಾಗಿ ಬೇಟೆಯಾಡುತ್ತಾರೆಂಬ ಬಗ್ಗೆಯೂ ಆರೋಪವಿದೆ. ಹಾಸನ ಅರಣ್ಯ ಇಲಾಖೆ ಈ ಬಗ್ಗೆ ಜಾಗ್ರತೆ ಮೂಡಿಸಬೇಕಾಗಿದೆ. ಕಪ್ಪು, ಬಿಳಿ, ಕೊಂಚ ಕೇಸರಿ. ತಲೆಯ ಮೇಲೆ ಕಪ್ಪು ಪಟ್ಟಿ ಈ ಬಾತುಗಳ ವಿಶೇಷ. ಹವ್ಯಾಸಿ ಫೋಟೋಗ್ರಾಫರ್‍ಗಳು ಇಲ್ಲಿಗೆ ಬಂದು ವಿಶೇಷ ಪಕ್ಷಿಗಳ ಫೋಟೋ ಕ್ಲಿಕ್ಕಿಸಿ ಸಂತಸ ಪಡುತ್ತಾರೆ. ಅದೇ ರೀತಿ ಪ್ರವಾಸಿಗರು ಕೂಡ ಈ ವಿಶೇಷ ಹಕ್ಕಿಗಳನ್ನು ನೋಡಿ ಸಂಭ್ರಮಿಸುತ್ತಾರೆ.