ಉಡುಪಿ: ನಾಯಕತ್ವ ಗೊಂದಲ, ಸಂಪುಟ ಕಿತ್ತಾಟ, ಅತೃಪ್ತರ ಮಧ್ಯೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ನಿನ್ನೆಯಿಂದ ಕರಾವಳಿ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರು ಉಡುಪಿಯ ಕುಂಭಾಶಿಯ ಆನೆಗುಡ್ಡ ಗಣಪತಿಗೆ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. ಆನೇಗುಡ್ಡ ಗಣಪತಿ ದೇಗುಲದಲ್ಲಿ 1,008 ತೆಂಗಿನಕಾಯಿ ಗಣಹೋಮ ಮಾಡಿಸಲಿದ್ದಾರೆ. ಸಿಎಂ ಒಳಿತಿಗಾಗಿ ಅವರ ಸ್ನೇಹಿತರು ಹಮ್ಮಿಕೊಂಡಿರುವ ಗಣಹೋಮದಲ್ಲಿ ಭಾಗಿಯಾಗಿ ಆಗಲಿದ್ದಾರೆ. ನೆಮ್ಮದಿ, ಸಮಾಧಾನ, ತೃಪ್ತಿಗಾಗಿ ಸಿಎಂ ಯಡಿಯೂರಪ್ಪ ದೇವರ ಮೊರೆ ಹೋಗಿದ್ದಾರೆ.
ರಾಜ್ಯ ರಾಜಕಾರಣದ ಜಂಜಾಟದ ನಡುವೆಯೇ ಇಂದಿನಿಂದ 2 ದಿನಗಳ ಕಾಲ ಯಡಿಯೂರಪ್ಪ ಟೆಂಪಲ್ ರನ್‍ಗೆ ಮುಂದಾಗಿದ್ದಾರೆ. ಸಿಎಂ ಬಿಎಸ್‍ವೈ ಒಳಿತಿಗಾಗಿ ಕುಂದಾಪುರದ ರಾಘವೇಂದ್ರ ರಾವ್ ಎಂಬವರ ಕುಟುಂಬ ನಡೆಸುವ ಹೋಮದಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆಯಲಿದ್ದಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜಕೀಯ ಜಂಟಾಟದ ನಡುವೆ ಕರಾವಳಿಗೆ ಬಂದಿದ್ದೇನೆ, ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಗಣಪತಿ ಕೈಬಿಡುವುದಿಲ್ಲ ಎಂದಿದ್ದಾರೆ.