ಮಡಿಕೇರಿ : ಮಂಜಿನನಗರಿ ಮಡಿಕೇರಿಯನ್ನು ಹೆಲಿಕಾಪ್ಟರ್ ಮೂಲಕ ಸುತ್ತಾಡಬೇಕು ಎಂದು ಕನಸು ಕಾಣುವ ಮಂದಿಗೆ ಗುಡ್‌ನ್ಯೂಸ್. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲವು ದಿನಗಳ ಮಟ್ಟಿಗೆ ಹೆಲಿಟೂರಿಸಂಗೆ ಅವಕಾಶ ನೀಡಲಾಗಿದೆ.
ತುಂಬೆ ಏವಿಯೇಷನ್ ಸಂಸ್ಥೆ ಮಡಿಕೇರಿಯಲ್ಲಿ ಇಂದಿನಿಂದ ಜನವರಿ 1 ವರೆಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿ ವೀಕ್ಷಣೆ ಮಾಡಿಸಲಿದೆ. ಸಂಪೂರ್ಣ ಬೆಟ್ಟಗುಡ್ಡಗಳು, ಹಸಿರು ಕಾನನಗಳಿಂದಲೇ ತುಂಬಿರುವ ಮಡಿಕೇರಿಯ ಸೌಂದರ್ಯವನ್ನು ರಸ್ತೆಗಳ ಮೂಲಕವಷ್ಟೇ ಸವಿದಿದ್ದ ಪ್ರವಾಸಿಗರು ಇನ್ನು ಒಂದು ವಾರಗಳ ಕಾಲ ಆಕಾಶದಲ್ಲಿ ತೇಲಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
Advertisement
Advertisement
Advertisement
ಮ್ಯಾನ್ಸ್ ಕಾಂಪೌಡ್ ಮೈದಾನದಿಂದ ಹಾರಾಟ ನಡೆಸುವ ಹೆಲಿಕಾಪ್ಟರ್ ಮಡಿಕೇರಿಯ ನಗರ ಸೇರಿದಂತೆ ಮಡಿಕೇರಿ ಹೊರವಲಯದಲ್ಲೂ ಹಾರಾಟ ನಡೆಸಲಿದೆ. ಆದರೆ ಆಕಾಶದಲ್ಲಿ ಹಾರಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಮೂರು ಸಾವಿರ ಭರಿಸಬೇಕು. ಎಂಟು ನಿಮಿಷಗಳ ಕಾಲ ನೀವು ಆಕಾಶದಲ್ಲಿ ಸುತ್ತಾಡಲು ಮೂರು ಸಾವಿರ ರೂಪಾಯಿ ಶುಲ್ಕ ಕಟ್ಟಬೇಕು.
Advertisement
ಒಟ್ಟಿನಲ್ಲಿ ಕೋವಿಡ್ ನಿಂದ ಟೂರಿಸಂ ಕುಗ್ಗಿರುವ ಸಂದರ್ಭದಲ್ಲಿ ಪ್ರವಾಸಿಗರನ್ನು ಕೊಡಗಿಗೆ ಸೆಳೆದು ಕೊಡಗಿನ ಆರ್ಥಿಕತೆಯನ್ನು ವೃದ್ಧಿ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸೀಮಿತ ಅವಧಿಯ ಈ ಹೆಲಿಟೂರಿಸಂ ಅನುಕೂಲವಾಗುತ್ತಾ ಎನ್ನೋದನ್ನು ಕಾದು ನೋಡಬೇಕಾಗಿದೆ.