ಕೊಪ್ಪಳ: ರಾಜ್ಯಪಾಲ ವಜುಭಾಯಿ ವಾಲಾ ಅವರು ಇಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಗೆ ಹೆಲಿಕಾಪ್ಟರ್ ಮೂಲಕವಾಗಿ ಬಂದಿಳಿದಿದ್ದರು. ಆ ಸಮಯದಲ್ಲಿ ಹೆಲಿಕಾಪ್ಟರ್ ಮುಂದೆ ನಿಂತು ಪೋಸ್ ಕೊಟ್ಟ ಖಾಕಿಪಡೆ ಫೋಟೋ ತೆಗೆಸಿಕೊಂಡಿದ್ದಾರೆ.
Advertisement
ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಆನೆಗೊಂದಿಗೆ ಬಂದಿಳಿದ್ದರು. ಸ್ಥಳೀಯ ಸಂಸದರಾದ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಡಿ.ಸಿ.ವಿಕಾಸ್ ಕುಮಾರ್ ವಜುಭಾಯಿ ವಾಲಾ ಅವರನ್ನು ಸ್ವಾಗತಿಸಿದರು. ಹೆಲಿಪ್ಯಾಡ್ ಗೆ ಬಂದಿಳಿದು ರಾಜ್ಯಪಾಲರು ಸುಮಾರು 40 ನಿಮಿಷ ವಿಶ್ರಾಂತಿ ಮಾಡಿದರು. ಬಳಿಕ ರಸ್ತೆ ಮೂಲಕ ಅಂಜನಾದ್ರಿಗೆ ತೆರಳಿ ಶಿಲಾಪೂಜೆ ಸಲ್ಲಿಸಿದರು.
Advertisement
Advertisement
ಖಾಕಿಗಳ ಸೆಲ್ಫಿ ಕ್ರೇಜ್: ಆನೆಗೊಂದಿಯಿಂದ ರಾಜ್ಯಪಾಲರು ರಸ್ತೆ ಮೂಲಕ ಅಂಜಾನದ್ರಿಗೆ ತೆರಳಿದಾಗ ಹೆಲಿಕಾಪ್ಟರ್ ಮುಂದೆ ಬರೀ ಪೊಲೀಸರೇ ದಂಡು ನಿಂತಿತ್ತು. ಯಾಕಂದ್ರೆ ಅಲ್ಲಿ ನಿಂತ ಪೊಲೀಸರೆಲ್ಲ ಹೆಲಿಕಾಪ್ಟರ್ ಮುಂದೆ ನಿಂತು ಡಿಫರೆಂಟ್ ಡಿಫರೆಂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಕೆಲವರಂತು ಆ ಕಡೆ, ಈ ಕಡೆ ನಿಂತು ಪೊಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯಾಗಿದ್ದರು. ಬಂದೋ ಬಸ್ತ್‍ಗೆ ಬಂದ ಪೊಲೀಸರು, ಮಹಿಳೆಯರು ಪುರುಷರು ಎನ್ನದೆ ಹೆಲಿಕಾಪ್ಟರ್ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.