ಬೆಂಗಳೂರು: ರಾಜ್ಯದಲ್ಲಿ ಉಲ್ಬಣಗೊಳ್ತಿರುವ ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಸರ್ಕಾರ ಹರಸಾಹಸ ಮಾಡುತ್ತಿದೆ. ಆದರೆ ಇತ್ತ ಕೊರೊನಾ ರುದ್ರ ತಾಂಡವಕ್ಕೆ ಎಲ್ಲಾ ದಾಖಲೆಗಳು ಪುಡಿಪುಡಿಯಾಗಿದ್ದು, ರಾಜ್ಯದಲ್ಲಿ 2ನೇ ಬಾರಿಗೆ ದಿನದಲ್ಲಿ 50ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದರೊಂದಿಗೆ ಮೃತರ ಸಂಖ್ಯೆ 500 ದಾಟಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಮಾಹಿತಿಯ ಅನ್ವಯ, ರಾಜ್ಯದಲ್ಲಿ ಇಂದು 57 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 543ಕ್ಕೇರಿದೆ. ಇಂದು ಬೆಂಗಳೂರಿನಲ್ಲಿ 29, ದಕ್ಷಿಣ ಕನ್ನಡದಲ್ಲಿ 8, ಮೈಸೂರಲ್ಲಿ 4, ಬೀದರ್ 3, ಕಲಬುರಗಿ, ಮೈಸೂರು, ಚಿಕ್ಕಬಳ್ಳಾಪುರ, ಗದಗದಲ್ಲಿ ತಲಾ 2, ಬಳ್ಳಾರಿ, ರಾಯಚೂರು, ಉತ್ತರ ಕನ್ನಡ, ಹಾವೇರಿಯಲ್ಲಿ ತಲಾ 1 ಸಾವಿನ ವರದಿಗಳು ದೃಢವಾಗಿದೆ.
Advertisement
Advertisement
ಅನ್‍ಲಾಕ್ 2 ಆರಂಭಕ್ಕೆ ಮೊದಲು ಜೂನ್ 30ರವರೆಗೆ ರಾಜ್ಯದಲ್ಲಿ 246 ಸಾವಿನ ಪ್ರಕರಣಗಳು ವರದಿಯಾಗಿದ್ದವು. ಆದರೆ 10 ದಿನಗಳ ಅವಧಿಯಲ್ಲಿ ಕೊರೊನಾ ಸಾವುಗಳ ಸಂಖ್ಯೆ ಹೆಚ್ಚು ಕಡಿಮೆ ಡಬಲ್ ಆಗಿದೆ. ಒಟ್ಟು 486 ಮಂದಿ ಸೋಂಕಿಗೆ ಬಲಿ ಆಗಿದ್ದಾರೆ. ಸಾವುಗಳ ದಿನದ ಸರಾಸರಿ 30. ಇನ್ನು ರಾಜ್ಯದಲ್ಲಿಗ ಅಂದಾಜು 3 ಸಾವಿರ ಹೈ ರಿಸ್ಕ್ ಪ್ರಕರಣಗಳಿವೆ. ಇದರಲ್ಲಿ 472 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರವೊಂದರಲ್ಲೇ 301 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ರಾಜ್ಯದಲ್ಲಿ ಸೋಂಕಿತ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವುದರೊಂದಿಗೆ ಚೇತರಿಕೆ ಪ್ರಮಾಣದಲ್ಲಿಯೂ ಇವತ್ತು ದಾಖಲೆ ಸೃಷ್ಟಿಯಾಗಿದೆ. ಇಂದು 1,003 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಒಟ್ಟಾರೆ ಗುಣಮುಖವಾಗುತ್ತಿರೋ ಸಂಖ್ಯೆ ತೀರಾ ಕಡಿಮೆ ಇರೋದು ಆತಂಕಕ್ಕೆ ಕಾರಣವಾಗಿದೆ. ಕಳೆದೊಂದು ವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಚೇತರಿಕೆ ಪ್ರಮಾಣ 41.3 ರಷ್ಟಿದೆ. ಚೇತರಿಕೆ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೆಳಗಿನಿಂದ 2ನೇ ಸ್ಥಾನ ಗಿಟ್ಟಿಸಿಕೊಂಡಿದೆ.
Advertisement
ಸಾವನ್ನಪ್ಪಿದವರ ವಿವರ:
ಬೆಂಗಳೂರು: ರೋಗಿ-11754, ರೋಗಿ-11780, ರೋಗಿ-11805, ರೋಗಿ-11806, ರೋಗಿ-12695, ರೋಗಿ-12747, ರೋಗಿ-12748, ರೋಗಿ-13045, ರೋಗಿ-13169, ರೋಗಿ-13655, ರೋಗಿ-13714, ರೋಗಿ-13759, ರೋಗಿ-13949, ರೋಗಿ-14058, ರೋಗಿ-14752, ರೋಗಿ-14851, ರೋಗಿ-14852, ರೋಗಿ-14925, ರೋಗಿ-14948, ರೋಗಿ-15092, ರೋಗಿ-15135, ರೋಗಿ-15154, ರೋಗಿ-15753, ರೋಗಿ-15875, ರೋಗಿ-15898, ರೋಗಿ-15902, ರೋಗಿ-15904, ರೋಗಿ-15905, ರೋಗಿ-15937 ಮಂದಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡದ ರೋಗಿ-9590 59 ವರ್ಷದ ಮಹಿಳೆ, ರೋಗಿ-11382 32 ವರ್ಷದ ಮಹಿಳೆ, ರೋಗಿ-18579 66 ವರ್ಷದ ವೃದ್ಧ, ರೋಗಿ-23033 58 ವರ್ಷದ ಮಹಿಳೆ, ರೋಗಿ-25716 57 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆಯಲ್ಲಿ ರೋಗಿ-9730 75 ವರ್ಷದ ವೃದ್ಧ, ರೋಗಿ-31130 52 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.
ಬಳ್ಳಾರಿಯ ರೋಗಿ-15538 47 ವರ್ಷದ ಪುರುಷ, ಮೈಸೂರಿನ ರೋಗಿ-19746 89 ವರ್ಷದ ವೃದ್ಧ, ರೋಗಿ-29097 42 ವರ್ಷದ ಪುರುಷ, ರೋಗಿ-31248 65 ವರ್ಷದ ವೃದ್ಧೆ, ರೋಗಿ-31401 72 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆಯ ರೋಗಿ-21399 75 ವರ್ಷದ ವೃದ್ಧ, ರೋಗಿ-26711 61 ವರ್ಷದ ವೃದ್ಧ, 26727 72 ವರ್ಷದ ವೃದ್ಧ, ಚಿಕ್ಕಮಗಳೂರಿನ ರೋಗಿ-21603 62 ವರ್ಷದ ವೃದ್ಧ, ಕಲಬುರಗಿಯ ರೋಗಿ-24855 52 ವರ್ಷದ ಪುರುಷ, ರೋಗಿ-26661 61 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.
ಧಾರವಾಡದ ರೋಗಿ-25518 40 ವರ್ಷದ ಪುರುಷ, ರೋಗಿ-30715 60 ವರ್ಷದ ವೃದ್ಧ, ಉತ್ತರ ಕನ್ನಡ ಜಿಲ್ಲೆಯ ರೋಗಿ-28375 71 ವರ್ಷದ ವೃದ್ಧೆ, ರಾಯಚೂರಿನ ರೋಗಿ-28591 55 ವರ್ಷದ ಪುರುಷ, ಮೈಸೂರಿನ ರೋಗಿ-29097 42 ವರ್ಷದ ಪುರುಷ, ರೋಗಿ-31248 65 ವರ್ಷದ ವೃದ್ಧೆ, ರೋಗಿ-31401 ವರ್ಷದ ವೃದ್ಧ, ಚಿಕ್ಕಬಳ್ಳಾಪುರದ ರೋಗಿ-31133 50 ವರ್ಷದ ಮಹಿಳೆ, ರೋಗಿ-31152 57 ವರ್ಷದ ಪುರುಷ, ಹಾವೇರಿಯ ರೋಗಿ-31816 82 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.