ಹೆದ್ದಾರಿಯಲ್ಲಿ ಹೆತ್ತ ಮಗುವನ್ನು ಕೊಡಲಿಯಿಂದ ಕೊಚ್ಚಿಕೊಂದ ತಾಯಿ

Public TV
1 Min Read
Mother

– ತಾಯಿ ಕೊಟ್ಟಿರುವ ಕಾರಣ ಕೇಳಿ ಶಾಕ್

ಭೋಪಾಲ್: ತಾನು ಹೆತ್ತ ಮಗುವನ್ನು ತಾಯಿ, ನೀನು ಮಗುವಲ್ಲ ಕುರಿ ಎಂದು ಕೊಡಲಿಯಿಂದ ಕೊಚ್ಚಿಕೊಂದಿರುವ ಘಟನೆ ಭೋಪಾಲ್‍ನ ಅಶೋಕ್ ನಗರದಲ್ಲಿ ನಡೆದಿದೆ.

ಪಾಪಿ ತಾಯಿಯನ್ನು ರಶ್ಮಿ ಲೋಧಿ ಎಂದು ಗುರುತಿಸಲಾಗಿದೆ. ಈಕೆ ತನ್ನ 8 ತಿಂಗಳ ಮಗುವನ್ನು ಕೊಚ್ಚಿಕೊಂದಿದ್ದಾಳೆ. 8 ತಿಂಗಳ ಕಾಲ ಮಗುವನ್ನು ಚೆನ್ನಾಗಿಯೇ ನೋಡಿಕೊಂಡಿರುವ ತಾಯಿ ಇದೀಗ ಕೊಡಲಿಯಿಂದ ಕೊಚ್ಚಿಕೊಂದಿದ್ದಾಳೆ.

forest road

ಮನೆಯ ಹತ್ತಿರ ಇರುವ ಹೆದ್ದಾರಿಯಲ್ಲಿ ಮಗುವನ್ನು ಮಲಗಿಸಿ ಕೊಡಲಿಯಿಂದ 8 ತಿಂಗಳ ಹಸುಗುಸನ್ನು ಕೊಚ್ಚಿಕೊಂದಿದ್ದಾಳೆ. ನಂತರ ಸ್ವತಃ ತಾನೇ ಮಗುವಿನ ಶವನ್ನು ಮನೆಗೆ ಎತ್ತಿಕೊಂಡು ಬಂದಿದ್ದಾಳೆ. ಮಗುವನ್ನು ಕೊಲ್ಲಲು ಕಾರಣ ಕೇಳಿದವರಿಗೆ ವಿಚಿತ್ರವಾಗಿ ಉತ್ತರ ನೀಡಿದ್ದಾಳೆ. ಅದು ಮಗುವಲ್ಲ ಕುರಿ ಹಾಗಾಗಿ ಕೊಚ್ಚಿಕೊಂದಿದ್ದೇನೆ ಎಂದು ಹೇಳುವ ಮೂಲಕವಾಗಿ ಸುತ್ತಮುತ್ತಲಿನವರಲ್ಲಿ ಭಯವನ್ನು ಹುಟ್ಟಿಸಿದ್ದಾಳೆ.

baby

ಹೆಂಡತಿಯ ಈ ವಿಚಿತ್ರವರ್ತನೆಯಿಂದ ಮನನೊಂದ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಪೊಲೀಸರ ಎದುರು ಮಗು ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ಸತ್ತು ಹೋಗಿದೆ ಎಂದು ಹೇಳಿದ್ದಾಳೆ. ಆಕೆಯ ಪೋಷಕರು ಈ ವಿಚಾರವನ್ನು ಬಚ್ಚಿಡಲು ಪ್ರಯತ್ನಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ, ಹಾಗಾಗಿ ಈ ಕೃತ್ಯವನ್ನು ಮಾಡಿದ್ದಾಳೆ ಎಂದು ಆಕೆಯ ಹೆತ್ತವರು ಹೇಳುತ್ತಿದ್ದಾರೆ. ಸದ್ಯ ಆರೋಪಿ ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *