– ಪ್ರಾಣಾಪಾಯದಿಂದ ಪಾರಾದ ಚಾಲಕ
ಮುಂಬೈ: ಪುಣೆಯ ಚಾಂದಿನಿ ಚೌಕ್ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಚಲಿಸುತ್ತಿದ್ದ ಟ್ರಕ್ ಹೊತ್ತಿ ಉರಿದಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ ಟ್ರಕ್ ನಿಲ್ಲಿಸಿ ಕೆಳಗೆ ಇಳಿದಿದ್ದರಿಂದ ಬದುಕುಳಿದಿದ್ದಾನೆ.
ಶನಿವಾರ ಸಂಜೆ 5.30ಕ್ಕೆ ಈ ಅವಘಡ ಸಂಭವಿಸಿದ್ದು, ಚಾಂದಿನಿ ಚೌಕ್ ಬಳಿಯ ವಾರ್ಜೆ ಸೇತುವೆ ಸುಮಾರು ಒಂದು ಗಂಟೆಗಳ ಕಾಲ ಹೊತ್ತಿ ಉರಿದಿದ್ದರಿಂದ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋ ಮೀಟರ್ ಗಟ್ಟಲೇ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.
Advertisement
ಹೆದ್ದಾರಿಯಲ್ಲಿ ರೈತನಿಗೆ ಗುದ್ದಿ, ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ವ್ಯಾನ್https://t.co/An3WwyXmU6#Highway #Farmer #Driver #KannadaNews
— PublicTV (@publictvnews) December 6, 2020
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಟ್ರಕ್ ನಲ್ಲಿಯ ಇಂಜಿನ್ ದೋಷದಿಂದ ಬೆಂಕಿ ಹತ್ತಿಕೊಂಡಿತ್ತು ಎನ್ನಲಾಗಿದೆ.