ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್‍ವುಡ್ ಸ್ಟಾರ್ ದುನಿಯಾ ವಿಜಯ್ ಅಪ್ಪ-ಅಮ್ಮನ ಪಾದಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಎರಡು ಪಾದಗಳು ಮತ್ತು ಅಭಿಮಾನಿಗಳ ಹಾರೈಕೆ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ಬರೆದುಕೊಂಡು ಹೆತ್ತವರ ಪಾದಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟು ಹಬ್ಬದಂದು ತಂದೆ-ತಾಯಿ ಪಾದಗಳ ಫೋಟೋವನ್ನು ಹಾಕಿ ವಿಭಿನ್ನವಾದ ರೀತಿಯಲ್ಲಿ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿದ್ದಾರೆ.
View this post on Instagram
ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಲಗ. ಈ ಸಿನಿಮಾದ ಟೈಟಲ್ ಟ್ರ್ಯಾಕ್ ಇನ್ನೇನು ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ದಿನಾಂಕ ಇನ್ನು ಪ್ರಕಟವಾಗಬೇಕಿದೆ. ಸಲಗ ಸಿನಿಮಾ ಮೂಲಕವಾಗಿ ದುನಿಯಾ ವಿಜಯ್ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
47 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದುನಿಯಾ ವಿಜಯ್ ಮೊದಲು ಸಿಕ್ಕಿರುವ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರು 2007ರಲ್ಲಿ ಸೂರಿ ನಿರ್ದೇಶನದ ದುನಿಯಾ ಚಿತ್ರ ಮೂಲಕವಾಗಿ ನಾಯಕನಾಗಿ ಸಿನಿಮಾ ರಂಗಕ್ಕೆ ಪರಿಚಯವಾಗಿ ಇದೀಗ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ.
ದುನಿಯಾ ವಿಜಯ್ ಅವರು ಈ ವರ್ಷ ಕೊರೊನಾ ವೈರಸ್ ಇರುವ ಕಾರಣಕ್ಕೆ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಹೀಗಾಗಿ ಅವರು ಅಭಿಮಾನಿಗಳಿಗೆ ಈ ವರ್ಷ ಮನೆ ಹತ್ತಿರ ಬರಬೇಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು.