ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಂದೆ, ತಾಯಿ ಮದುವೆಯ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿ ಪೋಷಕರು ಬಚ್ಚಿಟ್ಟಿದ್ದ ರಹಸ್ಯವನ್ನು ತಮ್ಮ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಬಯಲು ಮಾಡಿದ್ದಾರೆ.
ಅಮ್ಮ ಕಾಲೇಜು ಮುಗಿಸಿ ಹೋಗುವಾಗ ಬಸ್ಟ್ಯಾಂಡ್‍ನಲ್ಲಿ ನಿಂತಿರುವುದನ್ನು ನೋಡಿದ ಅಪ್ಪ ಮೊದಲ ನೋಟಕ್ಕೆ ಪ್ರೇಮದ ಬಲೆಗೆ ಸಿಲುಕಿದ್ದರು. ಅದಾದ ಮೇಲೆ ಪ್ರತಿದಿನ ಅವರಿಗಾಗಿ ಬಸ್‍ಸ್ಟ್ಯಾಂಡ್‍ಗೆ ಹೋಗಿ ಕಾಯುತ್ತಿದ್ದರು. ಅವರ ಪ್ರೇಮದ ವಿಚಾರವನ್ನು ನಮ್ಮ ಅಜ್ಜನ ಬಳಿ ಹೇಳಿದ್ದರು. ಆದರೆ ಸಮಾಜದಲ್ಲಿ ಅವರಿಗೆ ಕೆಟ್ಟ ಹೆಸರಿತ್ತು ಎನ್ನುವ ಕಾರಣಕ್ಕೆ ನಿರಾಕರಿಸಿದ್ದರು. ಅದಾದ ಮೇಲೆ ಕಂಗನಾ ಅವರ ತಾಯಿಯೇ ಕುಟುಂಬದ ಮನವೊಲಿಸಿ ಪ್ರೇಮ ವಿವಾಹವಾಗಿದ್ದರು.
View this post on Instagram
ಈ ವಿಚಾರವನ್ನು ನಮಗೆ ನಮ್ಮ ತಂದೆ ತಾಯಿ ಹೇಳಿರಲಿಲ್ಲ. ನಾನು ಮತ್ತು ರಂಗೋಲಿಯ ಬಳಿ ಇಂದಿಗೂ ಈ ವಿಚಾರದ ಕುರಿತಾಗಿ ಮಾತನಾಡಿಲ್ಲ. ನಮ್ಮದು ಅರೇಂಜ್ ಮ್ಯಾರೇಜ್ ಎಂದು ಹೇಳುತ್ತಿದ್ದರು. ಆದರೆ ನಮ್ಮ ಅಜ್ಜಿ ನಮಗೆ ಈ ವಿಚಾರವನ್ನು ಹೇಳಿದ್ದಾರೆ ಎಂದು ಬರೆದುಕೊಂಡು ಅಪ್ಪ ಅಮ್ಮ ಮದುವೆಯ ಕುರಿತಾದ ಘಟನೆಯನ್ನು ಹೇಳಿದ್ದಾರೆ. ಪೋಷಕರ ಮದುವೆ ಸಿಕ್ರೇಟ್ ಕುರಿತಾಗಿ ಬರೆದುಕೊಂಡು ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಕೋರಿದ್ದಾರೆ.