ಚಿತ್ರದುರ್ಗ: ಮಹಾಮಾರಿ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅಬ್ಬರಿಸಿ ಅನೇಕ ಸಾವು ನೋವುಂಟಾದ ಸಂದರ್ಭದಲ್ಲೂ ಜನರ ಹಣವನ್ನು ಲೂಟಿ ಹೊಡೆಯುತ್ತಿರುವ ಈ ಸರ್ಕಾರ ಪಿಕ್ ಪಾಕೆಟ್ ಸರ್ಕಾರವೆಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
Advertisement
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ಹೆಣ ಸುಡೋಕೂ ಸರದಿ, ಆಸ್ಪತ್ರೆ ಸೇರೋಕು ಸರದಿ, ಬೆಡ್ಗೂ ಸರದಿ ನಿಲ್ಲುವಂತಾಯ್ತು, ಔಷಧಿಗೂ ಸರದಿ, ಲಸಿಕೆ ಪಡೆಯಲೂ ಸರದಿ ಸಾಲು ಈಗಿರುವಾಗ ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ ಹೊಡೆದಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ಕೊರೊನಾ ಪಾಸಿಟಿವ್ ರೇಟ್ ಕುಗ್ಗಿಸಲು ಜಿಲ್ಲಾಡಳಿತ ಪ್ಲ್ಯಾನ್- ಹಳ್ಳಿ, ಹಳ್ಳಿಗೆ ಲಸಿಕೆ ಅಭಿಯಾನ
Advertisement
Advertisement
ಈ ಪ್ರತಿಭಟನೆಯನ್ನು ನಿನ್ನೆ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾಡಿದ್ದೇವೆ. ನಾಳೆ ಹೋಬಳಿ, ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಉಳಿದಂತೆ ಐದು ದಿನ ಐದು ಸಾವಿರ ಕಡೆ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ಇದೊಂದೇ ವರ್ಷದಲ್ಲಿ 18 ಬಾರಿ ಇಂಧನ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ 100 ರೂಪಾಯಿ ಮುಟ್ಟಿ ದೊಡ್ಡ ಸಾಧನೆ ಮಾಡಿದೆ. ಮೋದಿ, ಸಿಎಂ ಬಿಎಸ್ವೈ ಅವರೇ ಪೆಟ್ರೋಲ್ ಬೆಲೆ ಏರಿಸಿದ್ರಿ, ಆದರೆ ರೈತರಿಗೆ ಬೆಂಬಲ ಬೆಲೆ ಏರಿಸಿದ್ರಾ ? ಜನ ಬಿಜೆಪಿ ಸರ್ಕಾರಕ್ಕೆ ಉಗಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವೃದ್ಧೆಯನ್ನು 5 ಕಿ.ಮೀ ಜೋಲಿಯಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಯುವಕರು
Advertisement
ಶಿಸ್ತಿನ ಪಾಠ ಹೇಳಿದ ಡಿಕೆಶಿ:
ಹಿರಿಯೂರಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗರಂ ಆಗಿದ್ದರು. ಭಾಷಣದ ವೇಳೆ ಮಧ್ಯದಲ್ಲಿ ಮಾತಾಡಿದರೆ ಒದ್ದು ಓಡಿಸುತ್ತೇನೆ. ನಾನು ಕತ್ತೆ ಕಾಯೋಕೆ ಬಂದಿಲ್ಲ ಎಂದು ಗರಂ ಆಗಿ, ಇವರಿಗೆಲ್ಲಾ ಶಿಸ್ತು ಕಲಿಸಿ ಎಂದು ಜಿಲ್ಲಾ ಅಧ್ಯಕ್ಷ ತಾಜ್ ಪೀರ್ ಗೆ ಸೂಚಿಸಿದರು
There is anger across the nation against sky-high prices of petrol and diesel.
The BJP is not even offering token rollbacks in prices.
The BJP does not want to hear the people’s voices against high fuel taxes.
This is the arrogance of power. #Petrol100NotOut pic.twitter.com/6qrl6KSmmW
— DK Shivakumar (@DKShivakumar) June 12, 2021
ಎತ್ತಿನಗಾಡಿ ಏರಿ ವ್ಯಂಗ್ಯ:
ಹಿರಿಯೂರು ಪಟ್ಟಣದಲ್ಲಿ ಪಟ್ರೋಲ್ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಡಿ.ಕೆ.ಶಿವಕುಮಾರ್ ಅವರು ಸಾಂಕೇತಿಕವಾಗಿ ಎತ್ತಿನ ಗಾಡಿ ಏರಿ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನ ಗಾಡಿ ಏರಿದ ಡಿಕೆಶಿಗೆ ಮಾಜಿ ಸಚಿವ ಡಿ.ಸುಧಾಕರ್, ಆಂಜನೇಯ ಸಾಥ್ ನೀಡಿದರು.
ಸಾಮಾಜಿಕ ಅಂತರ ಮಾಯ :
ಡಿಕೆಶಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಹಾಗೂ ಪ್ರತಿಭಟನಾ ಸ್ಥಳದಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡಿದ್ದಾರೆ. ರಾಕ್ ಮಂಜು ಮನೆಗೆ ಉಪಹಾರಕ್ಕೆ ಡಿಕೆಶಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದರು. ಕಾರ್ಯಕರ್ತರನ್ನು ಹೊರ ಹಾಕಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತಿಭಟನೆ ವೇಳೆ ಸಹ ನೂಕುನುಗ್ಗಲು ಸೃಷ್ಟಿಯಾಗಿದ್ದೂ, ಕಾರ್ಯಕರ್ತರಿಗೆ ಎಷ್ಟೇ ಹೇಳಿದರು ಸಾಮಾಜಿಕ ಅಂತರ ಪಾಲಿಸಲಿಲ್ಲ. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಡಿ.ಸುಧಾಕರ್, ಹಾಲಿ ಶಾಸಕ ಟಿ. ರಘುಮೂರ್ತಿ, ಜಿ.ಎಸ್ ಮಂಜುನಾಥ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.