ಹೆಣ್ಮಕ್ಕಳ ಕಷ್ಟಕ್ಕೆ ಮಿಡಿದ ಶಂಕರ್ ಅಶ್ವತ್ಥ್ ವಿರುದ್ಧವೇ ತಿರುಗಿಬಿದ್ರಾ ಸದಸ್ಯರು ?

Public TV
2 Min Read
shankar ashwath 1

-ಶಂಕರ್ ಅಶ್ವತ್ಥ್ ಆ ಒಂದು ನಿರ್ಧಾರದಿಂದ ಬೇಸರಗೊಂಡ ಕಂಟೆಸ್ಟೆಂಟ್!
-ಶಂಕರ್ ಅಶ್ವತ್ಥ್ ಮಾಡಿದ ಆ ಅನಾಹುತದಿಂದ ವೈಷ್ಣವಿಗೆ ಆಗ್ತಿತ್ತಾ ಅಪಾಯ?

ಬೆಂಗಳೂರು: ಬಿಗ್ ಬಾಸ್ ಆಟ ದಿನದಿಂದ ದಿನಕ್ಕೆ ಮಜವಾಗ್ತಿದೆ. ಗೆಲ್ಲಲೇಬೇಕು ಅಂತಾ ಕಂಟೆಸ್ಟೆಂಟ್ ಪಣ ತೊಟ್ಟು ಹೋರಾಟ ನಡೆಸ್ತಿದ್ದಾರೆ. ನಿನ್ನೆ ಬಿಗ್ ಬಾಸ್ ನೀಡಿದ್ದ ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ ಟೀಂನಿಂದ ದಿವ್ಯಾ ಸುರೇಶ್ ಹಾಗೂ ಶುಭಾ ಟೀಂನಿಂದ ವೈಷ್ಣವಿ ಅತ್ಯುತ್ತಮ ಪ್ರದರ್ಶನ ನೀಡಿದ್ರು. ಹಗಲು ರಾತ್ರಿ ಎನ್ನದೇ ಊಟ-ತಿಂಡಿ ನಿದ್ದೆ ಬಿಟ್ಟು ವೈಷ್ಣವಿ ಹಾಗೂ ದಿವ್ಯಾ ಅವರು ಸ್ವಿಮ್ಮಿಂಗ್ ಪೂಲಲ್ಲಿದ್ದ ಸ್ಟೂಲ್ ಮೇಲೆಯೇ ಕೂತ್ಕೊಂಡಿದ್ರು. ಇವರಿಬ್ಬರನ್ನು ಬೀಳಿಸಲು ಎರಡು ತಂಡದ ಸದಸ್ಯರು ಸತತ ಪ್ರಯತ್ನಪಟ್ಟು ವಿಫಲರಾದ್ರು.

shankar ashwath 3

ಒಂದು ದಿನ ಮುಗಿದ್ರೂ ಅದೇ ಸ್ಟೂಲ್ ಮೇಲೆ ವೈಷ್ಣವಿ ಹಾಗೂ ದಿವ್ಯಾ ಸುರೇಶ್ ಏನೂ ಆಗಿಲ್ಲವೆಂಬ ರೀತಿಯೇ ಕುಳಿತುಕೊಂಡಿದ್ದರು. ಬಕೆಟ್ ನಿಂದ ನೀರು ಹಾಕಿದ್ರೂ, ಬಾಲ್ ಎಸೆದ್ರೂ ಇಬ್ಬರು ಯಾವುದಕ್ಕೂ ಜಗ್ಗದೇ ಕಲ್ಲಿನಂತೆ ಎಲ್ಲವನ್ನು ತಡೆದುಕೊಂಡಿದ್ದರು. ಎಷ್ಟೇ ಪ್ರಯತ್ನಪಟ್ಟರೂ ಅವರನ್ನು ನೀರಿಗೆ ಇಳಿಸೋದಿಕ್ಕೆ ಸಾಧ್ಯವಾಗೋದೇ ಇಲ್ಲ. ಆಗ ಎರಡು ತಂಡದ ಸದಸ್ಯರು ಗೇಮ್ ಮುಗಿಸಬೇಕು ಅಂತಾ ಡಿಸೈಡ್ ಮಾಡಿದ್ರು. ಇತ್ತ ಮಂಜು, ಅರವಿಂದ್, ದಿವ್ಯಾ ಉರುಡುಗ, ರಾಜೀವ್, ರಘು ನೀರಿಗೆ ಬಿದ್ದಿದ್ದರಿಂದ ಅವರು ಗೇಮ್ ನಲ್ಲಿ ಭಾಗಿಯಾಗುವಂತಿರಲಿಲ್ಲ.

shankar ashwath

ಯಾರಾದ್ರೂ ಗೇಮ್ ಮುಗಿಸಬೇಕು ಅನ್ನೋ ಟೈಮ್ ನಲ್ಲಿ ಶಂಕರ್ ಅಶ್ವತ್ಥ್, ವೈಷ್ಣವಿ ಹಾಗೂ ದಿವ್ಯಾ ಸುರೇಶ್ ಬಳಿ ಮಾತೆ ಕ್ಷಮಿಸಿಬಿಡು, ಆಟ ಮುಗಿಸಿ ಅಂತ ಮನವಿ ಮಾಡಿಕೊಂಡ್ರು. ನಿಮ್ಮನ್ನ ನೋಡಿದ್ರೆ ಬೇಜಾರಾಗುತ್ತೇ ಸಂಕಟ ಆಗುತ್ತೇ ಅಂತಾ ನೋವು ವ್ಯಕ್ತಪಡಿಸಿದ್ರು. ಅತ್ತ ನಿಧಿ ಗೇಮ್ ಎಂಡ್ ಮಾಡಬೇಕು ಅಂತಾ ಪ್ರಶಾಂತ್ ಜೊತೆ ಸೇರಿ ದುಪ್ಪಟ್ಟಗಳನ್ನು ಗಂಟು ಹಾಕ್ತಿದ್ರು. ಈ ವೇಳೆ ಶಂಕರ್ ಅಶ್ವತ್ಥ್ ಸ್ವಿಮ್ಮಿಂಗ್ ಪೂಲ್ ಗೆ ಹಾರಿ ವೈಷ್ಣವಿ ಅವರನ್ನು ಕೆಳಗೆ ಬೀಳಿಸಿದ್ರು.

shankar

ಶಂಕರ್ ಅಶ್ವತ್ಥ್ ಹೀಗೆ ಮಾಡ್ತಿದ್ದಂತೆ ಮನೆಮಂದಿಯಲ್ಲಾ ಕೆಲವು ಕ್ಷಣ ಶಾಕ್ ಆದ್ರು. ವೈಷ್ಣವಿಗೆ ಏನಾದ್ರೂ ಹೆಚ್ಚು ಕಮ್ಮಿಯಾಗಿದ್ರೆ. ಪೆಟ್ಟು ಬಿದ್ದಿದ್ದರೆ ಅಂತಾ ಶಂಕರ್ ಅಶ್ವತ್ಥ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ರು. ಮಂಜು ಅಂತೂ ಶಂಕರ್ ಅಶ್ವತ್ಥ್ ಮೇಲೆ ಫುಲ್ ಗರಂ ಆದ್ರು. ಈ ಘಟನೆಯಿಂದ ನಿಧಿ ಸುಬ್ಬಯ್ಯ ಕಣ್ಣೀರು ಹಾಕಿದ್ರು. ಶುಭಾ, ಪ್ರಶಾಂತ್, ದಿವ್ಯಾ ಉರುಡುಗ, ರಾಜೀವ್, ಅರವಿಂದ್ ಮನೆಯ ಎಲ್ಲಾ ಕಂಟೆಸ್ಟೆಂಟ್ ಶಂಕರ್ ಅಶ್ವತ್ಥ್ ಮಾಡಿದ್ದು ತಪ್ಪು ಎಂದು ಬೇಸರಕೊಂಡ್ರು.

ಮನೆಮಂದಿಯಲ್ಲಾ ಈ ಬಗ್ಗೆ ಚರ್ಚೆ ನಡೆಸಿ ಕೊನೆಯಾದಾಗಿ ಜಾತ್ರೆ ತಂಡ ಗೆಲುವು ಸಾಧಿಸಿದೆ ಎಂದು ಕ್ಯಾಪ್ಟನ್ ವಿಶ್ವನಾಥ್ ಅನೌನ್ಸ್ ಮಾಡಿದ್ರು. ಬಟ್ ಇಲ್ಲಿ ಶಂಕರ್ ಅಶ್ವತ್ಥ್ ಬೇಕು ಅಂತಾ ಹೀಗೆ ಮಾಡಿದ್ದಲ್ಲ. ಹೆಣ್ಣು ಮಕ್ಕಳ ಕಷ್ಟ ನೋಡಿ ಹಾಗೇ ಮಾಡಿದ್ದು, ಆ ತಪ್ಪಿಗೆ ತಮಗೆ ಏನೇ ಶಿಕ್ಷೆ ಕೊಟ್ರೂ ಅನುಭವಿಸೋದಿಕ್ಕೆ ನಾನ್ ರೆಡಿ ಅಂತಾ ಹೇಳಿದ್ದಾರೆ. ಇದಕ್ಕೆ ಬಿಗ್ ಬಾಸ್ ಏನ್ ಹೇಳ್ತಾರೋ ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *