ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ತಮ್ಮ ಮಗಳೊಂದಿಗಿನ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಐರಾ ಮತ್ತು ತಮ್ಮ ಸಹೋದರನ ಮಗಳಿಗೆ ಶುಭಾಶಯ ಕೋರಿದ್ದಾರೆ.
ಭಾನುವಾರ ಮಗಳ ದಿನಾಚರಣೆ ಇತ್ತು. ಹೀಗಾಗಿ ಅನೇಕ ನಟ-ನಟಿಯರು ತಮ್ಮ ಮಗಳಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಅದೇ ರೀತಿ ನಟಿ ರಾಧಿಕಾ ಪಂಡಿತ್ ಕೂಡ ತಮ್ಮ ಮಗಳು ಐರಾ ಮತ್ತು ಸಹೋದರನ ಮಗಳಿಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶ್ ಮಾಡಿದ್ದಾರೆ.
“ಹೆಣ್ಣು ಮಕ್ಕಳು ನಮಗೆ ಯಾವಾಗಲೂ ಅತ್ಯುತ್ತಮ ಸ್ನೇಹಿತರು. ನಿನ್ನೆ ಮಗಳ ದಿನ ಎಂದು ನಾನು ನಂಬಿದ್ದೇನೆ. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳಿಗೆ ಮಗಳ ದಿನಾಚರಣೆಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಮಗಳು ಐರಾ ಜೊತೆ ಬೀಚ್ ಚೇರ್ ಮೇಲೆ ಮಲಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜೊತೆಗೆ ಸಹೋದರನ ಮಗಳ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಎರಡನೇ ಫೋಟೋದಲ್ಲಿರುವ ಮಗು ಯಾರು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ಫೋಟೋದಲ್ಲಿರುವುದು ರಿಯಾ. ಈಕೆ ನನ್ನ ಸಹೋದರ ಗೌರಂಗ್‍ನ ಪ್ರೀತಿಯ ಮಗಳು ಎಂದು ತಿಳಿಸಿದ್ದಾರೆ. ಸಹೋದರನ ಮಗಳು ರಾಧಿಕಾಗೂ ಮಗಳಾಗುತ್ತಾಳೆ. ಹೀಗಾಗಿ ಸೋದರನ ಮಗಳು ರಿಯಾಗೂ ಶುಭಾಶಯವನ್ನು ತಿಳಿಸಿದ್ದಾರೆ.
ಇತ್ತೀಚೆಗೆ ರಾಧಿಕಾ ತಮ್ಮ ಮಕ್ಕಳ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಮೊದಲಿಗೆ ಯಥರ್ವ್ ಅಪ್ಪ ಯಶ್ ಮತ್ತು ಅಮ್ಮ ರಾಧಿಕಾ ಫೋಟೋ ಮುಂದೆ ಕುಳಿತಿದ್ದು, ಇಬ್ಬರನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದನು. ಈ ಮಧ್ಯೆ ಸಹೋದರಿ ಐರಾ ಬಂದು ತನ್ನ ಮುದ್ದು ತಮ್ಮನಿಗೆ ರಾಧಿಕಾ ಫೋಟೋ ತೋರಿಸಿ ಇದು ಅಮ್ಮ ಎಂದು ಹೇಳಿಕೊಟ್ಟಿದ್ದಳು. ಈ ವಿಡಿಯೋವನ್ನು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.
https://www.instagram.com/p/CFq6idSACzM/?igshid=1ddhpjglzitso
ಅಲ್ಲದೇ “ವಿದ್ಯಾರ್ಥಿ ಟೀಚರ್ ಆದಾಗ, ನನ್ನ ಕೆಲಸ ಮುಗಿದಿದೆ” ಎಂದು ಬರೆದುಕೊಂಡಿದ್ದರು. ಅಂದರೆ ಈ ಹಿಂದೆ ರಾಧಿಕಾ ತಮ್ಮ ಮಗಳು ಐರಾಗೆ ಯಶ್ ಮತ್ತು ತಮ್ಮ ಜೋಡಿ ಫೋಟೋವನ್ನು ತೋರಿಸಿ ಅಪ್ಪ, ಅಮ್ಮನ ಗುರುತಿಸುವಂತೆ ಹೇಳಿಕೊಟ್ಟಿದ್ದರು. ಆಗ ಐರಾ ವಿದ್ಯಾರ್ಥಿನಿಯಾಗಿದ್ದಳು. ಈಗ ತನ್ನ ಸಹೋದರ ಯಥರ್ವ್ ನಿಗೆ ಟೀಚರ್ ಆಗಿ ಅಪ್ಪ-ಅಮ್ಮ ಫೋಟೋ ತೋರಿಸಿ ಅಮ್ಮ ಹೇಳಿದ ರೀತಿಯೇ ಹೇಳಿಕೊಟ್ಟಿದ್ದರು.