ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೆಲವು ಸಂದರ್ಭಗಳಲ್ಲಿ ನನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಹಾಗಾಗಿ ಅವರ ವಿಚಾರದಲ್ಲಿ ಕಿವಿ, ಕಣ್ಣು ಬಾಯಿ ಮುಚ್ಚುಕೊಂಡು ಬಿಟ್ಟಿದ್ದೀನಿ ಎಂದು ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿಂದೇಟು ಹಾಕಿದರು.
Advertisement
ಜೆಡಿಎಸ್ ಮುಖಂಡರು ಮತ್ತು ಶಾಸಕರನ್ನ ನಾನು ಕಾಂಗ್ರೆಸ್ ಗೆ ಸೆಳೆಯುತ್ತಿಲ್ಲ. ಕೆಲವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದವರನ್ನ ನಾವು ತಿರಸ್ಕರಿಸಲ್ಲ. ಕೆಲವರು ಬಿಜೆಪಿ ಹೋಗಬಹುದು, ಕೆಲವರು ಕಾಂಗ್ರೆಸ್ ಗೆ ಬರಬಹುದು. ಸಿಎಂ ಇಬ್ರಾಹಿಂ ಏಲ್ಲೂ ಹೋಗಲ್ಲ. ಅವರ ಜೊತೆ ನಾನು ಮಾತಾಡಿದ್ದೇನೆ. ನಮ್ಮಿಬ್ಬರ ನಡುವೆ ಮಾತಾಡಿದ್ದು ನಮಗೆ ಗೊತ್ತಿದೆ ಎಂದು ಹೇಳುವ ಮೂಲಕ ಸಿಎಭ ಇಬ್ರಾಹಿಂ ಜೆಡಿಎಸ್ ಸೇರಲ್ಲ ಎಂದು ತಿಳಿಸಿದರು.
Advertisement
Advertisement
ಜೆಡಿಎಸ್ ಯಾವ ಟೀಂ ಅಂತ ನನಗೆ ಗೊತ್ತಿಲ್ಲ. ಮೈತ್ರಿಗಳಾದಾಗ ನಿಮಗೆ ಗೊತ್ತಾಗಲಿದೆ. ಈಗಲೇ ನಾನು ಜೆಡಿಎಸ್ ಬಿಜೆಪಿ ಬಿ ಟೀಂ ಅಂತಾ ಹೇಳಲು ಹೋಗಲ್ಲ. ಜೆಡಿಎಸ್ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೆ ನೋಡೋಣ ಆಗ ಎಲವನ್ನ ಮಾತನಾಡುತ್ತೇನೆ ಎಂದು ಹೇಳಿದರು.
Advertisement
ನಾನು ಈ ವರ್ಷ ಹೋರಾಟ, ಸಂಘಟನೆ ವರ್ಷ ಅಂತ ಪ್ರಕಟಣೆ ಮಾಡಿದ್ದೇನೆ. ಎಲ್ಲಾ ಬ್ಲಾಕ್ ಕಾಂಗ್ರೆಸ್ ಸದಸ್ಯರಿಂದ ಸಮಸ್ಯೆ ಪಟ್ಟಿ ಮಾಡುತ್ತಿದ್ದೇನೆ. ಸೋತವರಿಂದಲೂ ಅಭಿಪ್ರಾಯ ಪಡೆಯುತ್ತಿದ್ದೇನೆ.ನಾವು ಎಲ್ಲರ ಧ್ವನಿಯಾಗಬೇಕು. ಹಾಗಾಗಿ ಸಮಸ್ಯೆ ಆಲಿಸಲು ಮಂಗಳೂರಿನಲ್ಲಿ ನಾಳೆ ಸಭೆ ಕರೆದಿದ್ದೇನೆ. ಅಲ್ಲಿ ಬ್ಲಾಕ್ ಕಾಂಗ್ರೆಸ್ ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ನಂತರ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಸಭೆ ಇರಲಿದೆ. ಮಾರ್ಚ್ ನಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.