ಬೆಂಗಳೂರು: ಆಪರೇಷನ್ ಕಾಂಗ್ರೆಸ್‍ಗೆ ಜೆಡಿಎಸ್ ಕೈ ಹಾಕಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ, ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ನಿವಾಸಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಇಬ್ರಾಹಿಂ ನಿವಾಸಕ್ಕೆ ಮೂರು ಗಂಟೆ ಸುಮಾರಿಗೆ ಭೇಟಿ ಕೊಟ್ಟ ಹೆಚ್‍ಡಿಕೆ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.
ಹೆಚ್‍ಡಿಕೆ ಭೇಟಿ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಹಲವು ದಿನಗಳಿಂದ ನನ್ನನ್ನು ಭೇಟಿಯಾಗಬೇಕೆಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಹಾಗಾಗಿ ಇಂದು ನನ್ನ ನಿವಾಸಕ್ಕೆ ಬಂದಿದ್ದರು. ನಾನು ಯಾರನ್ನು ಬಿಟ್ಟಿಲ್ಲ. ಕೆಲವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಬದಾಮಿಗೆ ಸಿದ್ದರಾಮಯ್ಯರನ್ನ ಕರೆದುಕೊಂಡು ಹೋಗಿದ್ದು. ಸಮಯಕ್ಕೆ ತಕ್ಕಂತೆ ಕೆಲವರ ಟೇಸ್ಟ್ ಬದಲಾಗುತ್ತೆ. ಅದೇ ರೀತಿ ಸಿದ್ದರಾಮಯ್ಯ ಅವರ ಟೇಸ್ಟ್ ಬದಲಾಗಿದೆ. ನನ್ನ ಟೇಸ್ಟ್ ಬದಲಾಗಿದ್ದು, ಅದೇ ರಾಜಕೀಯ ಸಿದ್ದಾಂತಗಳನ್ನು ಹೊಂದಿದ್ದೇನೆ. ಕೆಲವರು ನನ್ನ ಜತೆ ಅಂತರ ಕಾಯ್ದುಕೊಂಡಿದ್ದೇನೆ. ಜೆಡಿಎಸ್ ಸೇರುವ ಬಗ್ಗೆ ಡಿಸೆಂಬರ್ 15 ರ ನಂತರ ನಾನು ರಾಜ್ಯ ಪ್ರವಾಸ ಮಾಡಿ ತೀರ್ಮಾನ ಮಾಡ್ತೀನಿ. ಮುಂದೆ ಏನು ಮಾಡಬೇಕು ಎಂಬುದರ ಕುರಿತು ಎಲ್ಲರ ಜೊತೆ ಚರ್ಚಿಸಿ ದೇವೇಗೌಡರ ಜೊತೆ ಮಾತನಾಡುತ್ತೇನೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, 1994ರ ರೀತಿ ಅವರು ಮತ್ತೆ ಪಾತ್ರ ನಿರ್ವಹಿಸಿ ಅಂತ ಮನವಿ ಮಾಡಿದ್ದೇನೆ. ಸೂಕ್ತ ಸಂದರ್ಭದಲ್ಲಿ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ