ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜಕೀಯ ನಿವೃತ್ತಿ ಪಡೆಯುವ ಕುರಿತು ಮಾತನಾಡಿದ್ದಾರೆ. ಅಂದು ಜೋಡೆತ್ತುಗಳಾಗಿದ್ದ ಕುಮಾರಸ್ವಾಮಿ ಮತ್ತು ಡಿಕೆಶಿ ಇಂದು ಗುದ್ದೆತ್ತುಗಳಾಗಿದ್ದಾರೆ. ಕುಮಾರಸ್ವಾಮಿ ನೀಡಿರುವ ಹೇಳಿಕೆಯ ವಿರುದ್ಧವಾಗಿ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ.
Advertisement
ನಾನು ಹಗಲು ಹೋಗಿ ಬಿಎಸ್‍ವೈ ಅವರನ್ನು ಭೇಟಿಯಾಗಿ ಬರುತ್ತೇನೆ. ಇವರಂತೆ ಮಧ್ಯರಾತ್ರಿ ಹೋಗಿಲ್ಲ ಎಂದು ಕುಮಾರಸ್ವಾಮಿ ಹೇಳಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಏನಾದರೂ ಒಂದು ದಿನ ಸಿಎಂ ಯಡಿಯೂರಪ್ಪನವರನ್ನಾಗಲಿ ಅಥವಾ ಈ ಸರ್ಕಾರದಲ್ಲಿರುವ ಯಾವುದೇ ಮಂತ್ರಿಗಳನ್ನಾಗಲಿ ಮಧ್ಯರಾತ್ರಿ ಭೇಟಿಯಾಗಿ ಕೆಲಸ ಮಾಡಿಸಿಕೊಂಡಿದ್ದರೆ ಕುಮಾರಸ್ವಾಮಿ ದಾಖಲೆ ಸಮೇತ ನಿರೂಪಿಸಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ನನ್ನ ಸವಾಲು ಎಂದು ಚಾಲೆಂಜ್ ಹಾಕಿದ್ದಾರೆ.
Advertisement
Advertisement
10 ವರ್ಷದ ಹಿಂದೆ ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದಾಗ ನಾನು ಮತ್ತು ಅವರು ಒಂದು ಮದುವೆಗೆ ಜೊತೆಯಾಗಿ ಖಾಸಗಿ ವಿಮಾನದಲ್ಲಿ ಹೋಗಿ ಬಂದಿದ್ದೇವು. ಆಗ ಮರುದಿನ ಬೆಳಗ್ಗೆ ಅಸೆಂಬ್ಲಿಯಲ್ಲಿ ಗಲಾಟೆ ನಡೆಯುತ್ತಾ ಇತ್ತು. ಆಗ ಶಿವಕುಮಾರ್ ನೀನು ಹೇಳೆ ಇಲ್ಲ ಈವಾಗ ಹೇಳಿತ್ತಿದ್ದೀಯಾ ಎಂದು ಬಿಎಸ್‍ವೈ ಹೇಳಿದ್ದರು ಅಷ್ಟೆ ಎಂದರು.
Advertisement
ನೀವು ನನ್ನ 30 ವರ್ಷಗಳಿಂದ ನೋಡಿದ್ದೀರಾ. ನನ್ನ ಹೋರಾಟ ಏನು ಅಂತಾ ನಿಮಗೆ ಗೊತ್ತು. ನಾನು ನಿಮ್ಮ ಕೆಳಗೆ ಕೆಲಸ ಮಾಡಿದ್ದು, ನಿಮಗೆ ಗೌರವ ಕೋಡುತ್ತೇವೆ. ನಿಮಗೆ ರಾಜಕೀಯ ಸಮಸ್ಯೆಗಳಿರಬಹುದು. ಆದರೆ ನನಗೆ ಅಂತಹ ಸಮಸ್ಯೆಗಳಿಲ್ಲ ಎಂದು ಕುಮಾರಸ್ವಾಮಿಯವರ ಹೇಳಿಕೆಗೆ ಡಿಕೆಶಿ ಟಾಂಗ್ ಕೊಟ್ಟರು.
ನಾನು ಕಾಂಗ್ರೆಸ್ ಪಕ್ಷದ ಒಬ್ಬ ಅಧ್ಯಕ್ಷ ಮತ್ತು ಕಾರ್ಯಕರ್ತನಾಗಿ ಈ ಶಾಲನ್ನು ಹೀನಾಯವಾಗಿ ಯಾರದೋ ಕೈಯಲ್ಲಿ ಬೈಸಿಕೊಂಡು ಇದರ ಗೌರವವನ್ನು ಹಾಳು ಮಾಡಲು ನಾನು ತಯಾರಿಲ್ಲ. ಈ ಶಾಲು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದು ಹೇಳುವ ಮೂಲಕವಾಗಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.