– ಆರೋಗ್ಯ ಹಾಗೂ ಪರಿಸರದ ಮೇಲೆ ಪ್ರಭಾವ
ಬೆಂಗಳೂರು: ಹೆಚ್ಚು ಸ್ಯಾನಿಟೈಸರ್ ಬಳಸಿದರೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಕಿಸಲೇ ಸೌರವ್ ಅವರು ಹೇಳಿದ್ದಾರೆ.
ಕೊರೊನಾ ಬರುವುದಕ್ಕಿಂತ ಮುಂಚೆ ಬಹುತೇಕ ಜನರಿಗೆ ಸ್ಯಾನಿಟೈಸರ್ ಬಗ್ಗೆನೇ ಗೊತ್ತಿರಲಿಲ್ಲ. ಆದರೆ ಕೊರೊನಾ ರೌದ್ರತೆ ಯಾವಾಗ ಶುರುವಾಯಿತೋ ಆಗಿನಿಂದ ಪ್ರತಿಯೊಬ್ಬರ ಕೈಯಲ್ಲಿ, ಬ್ಯಾಗ್‍ನಲ್ಲಿ ಸ್ಯಾನಿಟೈಸರ್ ಇದ್ದೆ ಇರುತ್ತೆ. ಅತಿಯಾದರೆ ಅಮೃತನೂ ವಿಷ ಎಂಬಂತೆ ಸ್ಯಾನಿಟೈಸರ್ ಗಳನ್ನು ಅತಿಯಾಗಿ ಬಳಸುವುದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಡಾ. ಸೌರವ್ ತಿಳಿಸಿದ್ದಾರೆ.
Advertisement
Advertisement
ಅತಿಯಾಗಿ ಸ್ಯಾನಿಟೈಸರ್ ಬಳಸುವುದರಿಂದಾಗೋ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಸ್ಕಿನ್ ಅಲರ್ಜಿ ಅಥವಾ ಚರ್ಮದ ಸೋಂಕುಗಳು ಉಂಟಾಗುವ ಸಾಧ್ಯತೆಯಿದೆ. ಜೊತೆಗೆ ಸ್ಯಾನಿಟೈಸರ್ ಗಳು ಆರೋಗ್ಯ ಹಾಗೂ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಸ್ಯಾನಿಟೈಸರ್ ಬಾಟಲಿಗಳಿಂದ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತದೆ. ಅಮೆರಿಕಾದ ವರದಿಯಂತೆ ಸ್ಯಾನಿಟೈಸರ್ ಗಳ ಬಳಕೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
Advertisement
Advertisement
ಕೆಮಿಕಲ್‍ಯುಕ್ತ ಸ್ಯಾನಿಟೈಸರ್ ಗಳನ್ನು ಬಳಸುವ ಬದಲು ಮನೆಯಲ್ಲೇ ತಯಾರಿಸಿದ ಸೋಂಕು ನಿವಾರಕಗಳನ್ನು ಬಳಸುವುದು ಉತ್ತಮ ಎನ್ನುವುದು ಹಲವರ ಅಭಿಮತವಾಗಿದೆ.