ಬೆಂಗಳೂರು: ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಬಿಬಿಎಂಪಿ ಚಿತಾಗಾರಗಳಿಗೆ ಒತ್ತಡ ಹೆಚ್ಚಿದೆ. ಬೆಳಗ್ಗೆ 7ರಿಂದ ರಾತ್ರಿ 12 ಗಂಟೆಯಾದರೂ ಸಾರ್ವಜನಿಕರು ಹೆಣ ಸುಡಲು ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನಿತ್ಯ ಹತ್ತಾರು ಅಂಬುಲೆನ್ಸ್ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.
Advertisement
ಯಲಹಂಕದ ಮೇಡಿ ಸ್ಮಶಾನದಲ್ಲಿ ಇಂತಹ ದುಸ್ಥಿತಿ ಎದುರಾಗಿದೆ. ನಗರದ ಐದು ಕಡೆ ಕೋವಿಡ್ ಶವ ಸುಡಲು ಅವಕಾಶ ನೀಡಲಾಗಿದೆ. ಆದರೆ ಎರಡು ಕಡೆ ಮಿಷನ್ ಕೆಟ್ಡಿದೆ. ಹೀಗಾಗಿ ಉಳಿದ ಶವಾಗಾರಗಳಲ್ಲಿ ಒತ್ತಡ ಹೆಚ್ಚಿದೆ. ಸರತಿಯಲ್ಲಿ ಅಂಬುಲೆನ್ಸ್ ಗಳು ನಿಲ್ಲುವುದು ಸಹ ಹೆಚ್ಚಿದೆ. ಒಂದು ಹೆಣ ಸುಡಲು 1 ಗಂಟೆ ಬೇಕು. ಹೀಗಾಗಿ ಸರತಿಯಲ್ಲಿ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದೆ.
Advertisement
ಇತ್ತ ಕೋವಿಡ್ ಮರಣ ಪ್ರಮಾಣದಲ್ಲಿ ಸಹ ಏರಿಕೆ ಕಂಡಿದ್ದು, ಬೆಳಗ್ಗೆ 7 ರಿಂದ ರಾತ್ರಿ 12 ಗಂಟೆ ವರೆಗೆ ಕೆಲಸ ಮಾಡಿದರೂ ಸಾಕಾಗುತ್ತಿಲ್ಲ. ಹೀಗಾಗಿ ಅಂಬುಲೆನ್ಸ್ ಗಳು ಸಾಲುಗಟ್ಟಿ ನಿಲ್ಲುತ್ತಿವೆ.
Advertisement
Advertisement
ಸೌಲಭ್ಯಗಳೂ ಇಲ್ಲ
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಸೌಲಭ್ಯ ಇತ್ತು. ಈ ಬಾರಿ ಸ್ಯಾನಿಟೈಸರ್, ಗ್ಲೌಸ್, ಮಾಸ್ಕ್, ಪಿಪಿಇ ಕಿಟ್ ಯಾವುದನ್ನೂ ಕೊಟ್ಟಿಲ್ಲ. ಹೀಗಾಗಿ ನಮಗೆ ರಕ್ಷಣೆ ಇಲ್ಲ, ಜೀವ ಭಯ ಕಾಡುತ್ತಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.