– ಮೂವರು ಮಕ್ಕಳ ತಾಯಿ ಅನೈತಿಕ ಸಂಬಂಧ ಆರೋಪ
ಭೋಪಾಲ್: ಮೂವರು ಮಕ್ಕಳ ತಾಯಿಯೊಬ್ಬಳು ಅನೈತಿಕ ಸಂಬಂಧ ಇಟ್ಟುಕೊಂಡಿರುವ ಆರೋಪದ ಮೇಲೆ ಸಾರ್ವಜನಿಕವಾಗಿ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ನಡೆದಿದೆ.
ಪುರುಷರ ಗುಂಪೊಂದು ಮಹಿಳೆಗೆ ರಸ್ತೆಯಲ್ಲಿ ಕೋಲುಗಳಿಂದ ಹೊಡೆಯುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ತನ್ನ ಪತಿಯನ್ನು ಭುಜದ ಮೇಲೆ ಹೊತ್ತುಕೊಳ್ಳುವಂತೆ ಪುರುಷರು ಬಲವಂತ ಮಾಡಿದ್ದಾರೆ. ಅಲ್ಲದೇ ಆಕೆಯನ್ನು ಗೇಲಿ ಮಾಡುತ್ತಾ, ಬೆದರಿಸಿರುವುದನ್ನು ಕಾಣಬಹುದಾಗಿದೆ.
Advertisement
Advertisement
ಕೊನೆಗೆ ಮಹಿಳೆ ತನ್ನ ಗಂಡನನ್ನು ಭುಜದ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ನಂತರ ಪತಿಯನ್ನು ಹೊತ್ತುಕೊಂಡು ಹೆಚ್ಚು ಸಮಯ ನಡೆಯಲು ಆಗದಿದ್ದಾಗ ಆಕೆಯನ್ನು ಕೋಲಿನಿಂದ ಹೊಡೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯ ಪತಿ ಸೇರಿದಂತೆ ಏಳು ಪುರುಷರ ವಿರುದ್ಧ ಝಾಬುವಾ ಕೊಟ್ವಾಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿದ ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ನರೇಂದ್ರ ಸಿಂಗ್ ಗಡಾರಿಯಾ, ಈ ಘಟನೆ ಝಾಬುವಾದ ಛಿಪ್ರಿ ರನ್ವಾಸ್ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗುಜರಾತ್‍ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಹಿಳೆ ಮತ್ತು ಆಕೆಯ ಪತಿ ಇತ್ತೀಚೆಗೆ ಮನೆಗೆ ಹೋಗಿದ್ದಾರೆ. ಮಹಿಳೆಯ ಪತಿ ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ. ಆದ್ದರಿಂದ ಕುಟುಂಬ ಮತ್ತು ಇತರ ಗ್ರಾಮಸ್ಥರು ಮಹಿಳೆಯನ್ನು ಸಾರ್ವಜನಿಕವಾಗಿ ಶಿಕ್ಷಿಸಲು ನಿರ್ಧರಿಸಿದರು ಎಂದು ಹೇಳಿದ್ದಾರೆ.
ಝಾಬುವಾ, ಅಲಿರಾಜ್‍ಪುರ ಮತ್ತು ಧಾರ್ ಜಿಲ್ಲೆಯಲ್ಲಿ ಇಂತಹ ಕ್ರೂರ ಶಿಕ್ಷೆಗಳು ಹೊಸತಲ್ಲ. ಇಂತಹ ಕೃತ್ಯಗಳಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಖಂಡಿಸಲು ಯಾರೂ ಧೈರ್ಯ ಮಾಡುವುದಿಲ್ಲ. ಇದರಿಂದ ತಮಗೆ ತೊಂದರೆಯಾಗುತ್ತದೆ ಎಂದು ಭಯಪಡುತ್ತಾರೆ ಎಂದು ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.